Roman Starvoit: ಕಾರಿನಲ್ಲಿ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ರಷ್ಯಾದ ಮಾಜಿ ಸಚಿವ

Mascow: ರಷ್ಯಾದ ಮಾಜಿ ಸಾರಿಗೆ ಸಚಿವ ರೋಮನ್ ಸ್ಟಾರೊವೊಯಿಟ್ (53) ತಮ್ಮ ಕಾರಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕುರಿತು ವರದಿಯಾಗಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ರೋಮನ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸದ ನಿಟ್ಟಿನಲ್ಲಿ ರೋಮನ್ ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಲಾಗಿದೆ ಎನ್ನಲಾಗಿದೆ. 2024 ರ ಮೇ ತಿಂಗಳಲ್ಲಿ ರೋಮನ್ ಅವರು ರಷ್ಯಾದ ಸಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ಇವರು ಇದಕ್ಕೂ ಮೊದಲು ಐದು ವರ್ಷಗಳ ಕಾಲ ಕುರ್ಸ್ಕ್ ಗವರ್ನರ್ ಆಗಿ ಸೇವೆ ಮಾಡಿದ್ದರು.
Comments are closed.