Basil plant: ತುಳಸಿ ಗಿಡ ದೇವತೆಯೇ? ಅದನ್ನು ಪೂಜಿಸುವುದು ಸರಿಯೇ? ಈ ಗಿಡವನ್ನು ಮನೆ ಮುಂದೆ ನೆಟ್ಟರೆ ಪ್ರಯೋಜನ ಏನು?

Share the Article

Basil plant: ತುಳಸಿ ಗಿಡಕ್ಕೆ ಭಾರತದಲ್ಲಿ ಹಿಂದೂ ಧರ್ಮದ ಪ್ರಕಾರ ವಿಶೇಷ ಮಹತ್ವವನ್ನು ನೀಡಲಾಗಿದೆ. ತುಳಸಿ ಗಿಡವನ್ನು ದೇವಿಯ/ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ನಿತ್ಯ ತುಳಸಿ ಪೂಜೆಯನ್ನು ಅನುಮೋದಿಸಲಾಗುತ್ತದೆ. ಎರಡು ಮೂರು ದಶಕಗಳ ಹಿಂದಿನವರೆಗೂ ತುಳಸಿ ಪೂಜೆ ಹಿಂದೂ ಮಹಿಳೆಯರು ದಿನಚರಿಯ ಭಾಗವಾಗಿತ್ತು. ಆಧುನಿಕ ವನಿತೆಯರು ತುಳಸಿಯ ಪೂಜೆ ಹಾಗಿರಲಿ ಅದರತ್ತ ನೋಡುವುದೂ ಇಲ್ಲ. ಹೊಸ ಪೀಳಿಗೆಯ ಯುವತಿಯರಿಗೆ ತುಳಸಿ ಅಂದರೆ ಏನು? ಹೇಗಿರುತ್ತೆದೆ? ಎಂಬುದು ಸಹ ಗೊತ್ತಿಲ್ಲ!!

ಅನೇಕ ಸಸ್ಯಗಳಂತೆ ತುಳಸಿಯು ಒಂದು ಸಸ್ಯ ಅದೇನು ದೇವರೆ…? ಅದನ್ನು ಪೂಜಿಸುವುದು ಸರಿಯೇ…? ಇದೊಂದು ಮೂಢನಂಬಿಕೆ ಅಲ್ಲವೇ…? ತುಳಸಿ ದೇವತೆಯೋ ಅಲ್ಲವೋ ಇದೊಂದು ಪ್ರತ್ಯೇಕ ವಿಷಯ. ಆದರೆ, ತುಳಸಿಯು ಆಯುರ್ವೇದದ ದೃಷ್ಟಿಯಿಂದ ಅನೇಕ ವೈದ್ಯಕೀಯ ಪ್ರಯೋಜನಗಳನ್ನು ಹೊಂದಿದೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ.

 

ತುಳಸಿ ಎಲೆಗಳು ವಿಟಮಿನ್ ಎ, ಸಿ ಮತ್ತು ಕೆ ಮತ್ತು ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳ ಉತ್ತಮ ಮೂಲಗಳಾಗಿವೆ. ಜೊತೆಗೆ, ಇದು ಫೈಬರ್ ಮತ್ತು ಪ್ರೋಟೀನ್ಗಳಲ್ಲಿ ಸಮೃದ್ಧವಾಗಿದೆ.

 

ತುಳಸಿ ಎಲೆಯ ಸಾರದಲ್ಲಿ ಕಾರ್ಬೋಹೈಡ್ರೇಟ್, ಟ್ಯಾನಿನ್, ಫ್ಲೇವನಾಯ್ಡ್, ಸಪೋನಿನ್, ಗ್ಲೈಕೋಸೈಡ್, ಟೆರ್ಪೆನಾಯ್ಡ್, ಕೊಬ್ಬಿನಾಮ್ಲಗಳು ಮತ್ತು ಫೀನಾಲ್ ಮುಂತಾದ ದ್ವಿತೀಯಕ ಮೆಟಾಬಾಲೈಟ್‌ಗಳು ಇರುತ್ತವೆ ಎಂದು ಅಧ್ಯಯನವು ಬಹಿರಂಗಪಡಿಸುತ್ತದೆ. ಅಲ್ಲದೆ, ಯುಜೆನಾಲ್, ಬೆಂಜೀನ್, 1, 2-ಡೈಮೆಥಾಕ್ಸಿ- 4- (2-ಪ್ರೊಪೆನಿಲ್), α – ಫರ್ನೆಸೀನ್ ಮತ್ತು ಸೈಕ್ಲೋಹೆಕ್ಸೇನ್, 1, 2, 4- ಟ್ರೈಥೆನೈಲ್ . ಈ ಸಸ್ಯ-ರಾಸಾಯನಿಕಗಳು ನಂಜುನಿರೋಧಕ, ನೋವು ನಿವಾರಕ, ಉರಿಯೂತ ನಿವಾರಕ, ಆಂಟಿಮೈಕ್ರೊಬಿಯಲ್, ಆಂಟಿಸ್ಟ್ರೆಸ್, ಇಮ್ಯುನೊಮಾಡ್ಯುಲೇಟರಿ, ಹೈಪೊಗ್ಲಿಸಿಮಿಕ್, ಹೈಪೊಟೆನ್ಸಿವ್ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿವೆ ಎಂದು ತಿಳಿದುಬಂದಿದೆ.

 

ತುಳಸಿಯ ಈ ಘಟಕಗಳಿಂದ ಲಭಿಸುವ ಕೆಲವು ಪ್ರಯೋಜನಗಳು:

ತುಳಸಿ ಸಸ್ಯವು ಮನಸ್ಸು, ದೇಹ ಮತ್ತು ಆತ್ಮಕ್ಕೆ ಪ್ರಯೋಜನವನ್ನು ನೀಡುತ್ತದೆ.

ತುಳಸಿ ಸಸ್ಯವು ಒತ್ತಡದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ತುಳಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಸೋಂಕುಗಳನ್ನು ನಿವಾರಿಸುತ್ತದೆ

ತುಳಸಿಯ ಕಷಾಯ ಶೀತ ಕೆಮ್ಮು ನೆಗಡಿ ಜ್ವರ ಇತ್ಯಾದಿಗಳಿಗೆ ರಾಮಬಾಣ ಔಷಧಿಯಾಗಿದೆ

ತುಳಸಿ ಸಸ್ಯವು ನಿರ್ವಿಶೀಕರಣ ಪರಿಣಾಮಗಳನ್ನು ಹೊಂದಿದೆ. ಆದ್ದರಿಂದ ತುಳಸಿಯು ರಕ್ತವನ್ನು ಶುದ್ಧೀಕರಿಸುತ್ತದೆ

ತುಳಸಿ ಸಸ್ಯವು ಉಸಿರಾಟದ ಸೋಂಕಿನ ವಿರುದ್ಧ ಹೋರಾಡುತ್ತದೆ

ತುಳಸಿ ರಸ ಕೀಟಗಳು ಕಡಿತವನ್ನು ಗುಣಪಡಿಸುತ್ತದೆ ಹಾಗೂ ತುಳಸಿ ಗಿಡ ಕೀಟಗಳನ್ನು ಹಿಮ್ಮೆಟ್ಟಿಸುತ್ತದೆ

ತುಳಸಿ ಸಸ್ಯದ ಪ್ರಯೋಜನಗಳು ಮೈಬಣ್ಣದ ಸುಧಾರಣೆಯನ್ನು ಒಳಗೊಂಡಿವೆ

ತುಳಸಿಯು ಬಾಯಿ ಹುಣ್ಣು, ದುರ್ವಾಸನೆ ಹಾಗೂ ಹಲ್ಲಿನ ಆರೋಗ್ಯಕ್ಕೆ ಸೂಕ್ತವಾಗಿದೆ

ತುಳಸಿ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಣೆಯಾಗುತ್ತದೆ

ತುಳಸಿ ಕೀಲು ನೋವುಗಳನ್ನು ನಿವಾರಿಸಲು ಸಹಾಯಕವಾಗಿದೆ

ಶ್ವಸನ ವ್ಯೂಹದ ಸಮಸ್ಯೆಗಳಿಗೆ ತುಳಸಿ ಉಪಯುಕ್ತವಾಗಿದೆ

ತುಳಸಿ ಗಿಡವು ಹೃದಯಕ್ಕೆ ಪ್ರಯೋಜನವನ್ನು ನೀಡುತ್ತದೆ

ಮಧುಮೇಹ: ತುಳಸಿಯು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ.

ತುಳಸಿಯ ಸೇವನೆ ಕೊಲೆಸ್ಟ್ರಾಲ್ ಹಾಗೂ ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಾಯಕವಾಗಿದೆ

ತುಳಸಿ ಮೂತ್ರಪಿಂಡದ ಸಮಸ್ಯೆಗಳಿಗೆ ಉಪಯುಕ್ತವಾಗಿದೆ

ತುಳಸಿ ತನ್ನ ಉತ್ಕರ್ಷಣ ವಿರೋಧಿ ಗುಣಗಳಿಂದಾಗಿ ಕ್ಯಾನ್ಸರ್ ಕಾಯಿಲೆಗಳಲ್ಲಿ ಅತ್ಯಂತ ಉಪಯುಕ್ತವಾಗಿದೆ.

ತುಳಸಿ ಉಪಯೋಗ ಚರ್ಮರೋಗಗಳನ್ನು ನಿವಾರಿಸಲು ಸಹಾಯಕವಾಗಿದೆ

ತುಳಸಿ ಗಿಡವು ಪರಿಸರವನ್ನು ಶುದ್ಧೀಕರಿಸುತ್ತದೆ

ತುಳಸಿ ಸಮೃದ್ಧಿಗೆ ಸಂಬಂಧಿಸಿದೆ

ತುಳಸಿಯನ್ನು ಬಳಸುವ ವಿಧಾನ:

ತುಳಸಿಯನ್ನು ಆಯಾ ಸಮಸ್ಯೆಗೆ ಅನುಗುಣವಾಗಿ ಬೇರೆ ಬೇರೆ ರೂಪಗಳಲ್ಲಿ ಉಪಯೋಗಿಸಲಾಗುತ್ತದೆ. ಎಲೆಗಳನ್ನು ಜಗಿದು ತಿನ್ನುವುದು, ಎಲೆಗಳ ರಸ ಕುಡಿಯುವುದು, ಕಷಾಯ ಮಾಡಿ ಕುಡಿಯುವುದು, ಇತರ ಆಹಾರ ಅಥವಾ ಔಷಧಿಗಳಲ್ಲಿ ಬೆರೆಸಿ ಸೇವಿಸುವುದು, ಪ್ರಸಾದ್ ಪೇಸ್ಟನ್ನು ಹಚ್ಚಿಕೊಳ್ಳುವುದು, ಇತ್ಯಾದಿ.

ತುಳಸಿಯ ಉಪಯೋಗವಾಗದಂಥ ರೋಗಗಳೆ ಇಲ್ಲ ಎನ್ನಬಹುದು. ಈ ಬಹುಗುಣಕಾರಿ ತುಳಸಿಯನ್ನು ಕಳೆದ ಮೂವತ್ತು ವರ್ಷಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿ ಹಾಗೂ ಸಂಚಿನ ಕಾರಣ ಭಾರತೀಯರು ತುಂಬಾ ಕಡೆಗಣಿಸಿದ್ದಾರೆ. ಜೀವನದ ಪ್ರತಿ ಆಯಾಮದಲ್ಲಿ ತುಳಸಿಯ ಉಪಯೋಗವಿದೆ. ಇಂಥ ತುಳಸಿಯನ್ನು ದೇವರೆಂದು ಪೂಜಿಸಿದರೆ ತಪ್ಪೇನು? ದೇವರು ಕೇವಲ ಮೂರ್ತಿಗಳಲ್ಲಿ ಇರುವುದಿಲ್ಲ. ದೇವರೆಂದರೆ ಹೆಜ್ಜೆ ಹೆಜ್ಜೆಗೂ ನಮ್ಮನ್ನು ಕಾಪಾಡುವ ಒಂದು ಶಕ್ತಿ? ಆ ಶಕ್ತಿ ಈ ತುಳಸಿ ಗಿಡದ ರೂಪದಲ್ಲಿಯೂ ಲಭ್ಯವಿದೆ.

ಮಹಿಳೆಯರಲ್ಲಿ ಮುಟ್ಟಿನ ತೊಂದರೆಗಳು, ತೀವ್ರವಾದ ಹೊಟ್ಟೆ ನೋವು, ಕೈ ಕಾಲು ಸೆಳೆತ, ಮೂಡ್ ಸ್ವಿಂಗ್‌, ಪಿಸಿಓಎಸ್, ಥೈರಾಯ್ಡ್, ಮಧುಮೇಹ, ಗರ್ಭಾವಸ್ಥೆಯಲ್ಲಿನ ಸಮಸ್ಯೆಗಳು ಮತ್ತು ಹಾರ್ಮೋನುಗಳ ಅಸಮತೋಲನದಂತಹ ಸಮಸ್ಯೆಗಳಲ್ಲಿ ಅತ್ಯಂತ ಮಹತ್ವದ ಔಷಧಿಯಾಗಿದೆ ಈ ತುಳಸಿ. ದಿನಾಲು ಬೆಳಿಗ್ಗೆ ತುಳಸಿಯ ಗಿಡದ ಗಾಳಿ ಸೇವನೆಯಿಂದಲೇ ಮಹಿಳೆಯರಿಗೆ ಸಾಕಷ್ಟು ಪ್ರಯೋಜನವಾಗುತ್ತದೆ. ಇದೇ ಕಾರಣಕ್ಕೆ ಮಹಿಳೆಯರು ನಿತ್ಯ ತುಳಸಿ ಪೂಜೆ ಮಾಡುವ ಪರಂಪರೆ ರೂಢಿಗೆ ಬಂದದ್ದು.

ಕೆಲ ದಶಕಗಳ ಹಿಂದಿನವರೆಗೂ ಅಂಗಳದಲ್ಲಿ ತುಳಸಿ ಇಲ್ಲದ ಮನೆ ಇರುತ್ತಿರಲಿಲ್ಲ. ಆದರೆ, ಇಂದು ತುಳಸಿ ಇರುವ ಮನೆಯೆ ಕಾಣುತ್ತಿಲ್ಲ. ಅಂಗಳದಲ್ಲಿ ಒಂದು ತುಳಸಿ ಗಿಡ ಇದ್ದರೆ ಅದೊಂದು ಪುಟ್ಟ ಔಷಧಾಲಯ ಇದ್ದ ಹಾಗೆ. ತುಳಸಿ ಗಿಡ ಇಲ್ಲದ ಮನೆ ನಿಜವಾದ ಭಾರತೀಯರ ಅಥವಾ ಹಿಂದೂ ಕುಟುಂಬದ ಮನೆಯೆ ಅಲ್ಲ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಲ್ಲಿ ಅಂಗಳ/ಹಿತ್ತಲದಲ್ಲಿ ನಿರರ್ಥಕವಾದ ಗಿಡಗಳನ್ನು ಬೆಳೆಸುವುದಕ್ಕಿಂತ ತುಳಸಿ, ಅಮೃತಬಳ್ಳಿ, ಇತ್ಯಾದಿ ಗಿಡಗಳನ್ನು ಭಾರತೀಯರು ಕಡ್ಡಾಯವಾಗಿ ಬೆಳೆಸಬೇಕು. ಇದರಿಂದ ಕಡಿಮೆ ಎಂದರೂ 50% ರೋಗಗಳನ್ನು ತಡೆಗಟ್ಟಬಹುದು. ಆಸ್ಪತ್ರೆಗೆ ದುಡ್ಡು ಸುರಿಯುವುದನ್ನು ತಪ್ಪಿಸಬಹುದು.

ತುಳಸಿಯಲ್ಲಿ ಒಟ್ಟು 5 ವಿಧಗಳಿವೆ. ಅವುಗಳೆಂದರೆ:

– ಶ್ಯಾಮ ತುಳಸಿ

– ರಾಮ ತುಳಸಿ

– ಶ್ವೇತ ತುಳಸಿ

– ವನ ತುಳಸಿ

– ನಿಂಬೆ ತುಳಸಿ

ಪ್ರತಿಯೊಂದುಕ್ಕೂ ತನ್ನದೇ ಆದ ಮಹತ್ವವಿದೆ ಆದರೆ ಔಷಧೀಯ ದೃಷ್ಟಿಯಿಂದ ಶಾಮ ತುಳಸಿಗೆ ಹೆಚ್ಚು ಮಹತ್ವವಿದೆ. ಆದ್ದರಿಂದ, ಮನೆ ಮನೆಯಲ್ಲಿ ತುಳಸಿ ಗಿಡವನ್ನು ಬೆಳೆದು ಪರಿಸರ/ಮನೆಯನ್ನು ಶುದ್ಧವಾಗಿರಿಸಿ ಹಾಗೂ ಸ್ವತಃ ಆರೋಗ್ಯವಂತರಾಗಿರಿ.

ಲೇಖನ: ಡಾ. ಪ್ರ. ಅ. ಕುಲಕರ್ಣಿ

ಇದನ್ನೂ ಓದಿ: Free bus: ರಾಜ್ಯದ ಮಹಿಳೆಯರಿಗೆ ಶಕ್ತಿ ನೀಡಿದ ಶಕ್ತಿ ಯೋಜನೆ – ಹೊಸ ಮೈಲಿಗಲ್ಲು ಸಾಧಿಸಿದ ಉಚಿತ ಬಸ್ ವ್ಯವಸ್ಥೆ

Comments are closed.