Chikkaballapura : ‘ಪರೀಕ್ಷೆಗೆ ಗೈಡ್ ಮಾಡ್ತೀನಿ ಬಾ’ ಎಂದು ಡಿಗ್ರಿ ವಿದ್ಯಾರ್ಥಿನಿಯನ್ನು ಪ್ರಗ್ನೆಂಟ್ ಮಾಡಿದ ಕ್ಲರ್ಕ್ !!

Share the Article

 

Chikkaballapura : ಡಿಗ್ರಿ ಕಾಲೇಜಿನ ವಿದ್ಯಾರ್ಥಿನಿ ಒಬ್ಬಳಿಗೆ ಅದೇ ಕಾಲೇಜಿನ ಕ್ಲರ್ಕ್ ಒಬ್ಬ ಪರೀಕ್ಷೆಗೆ ಗೈಡ್ ಮಾಡುತ್ತೇನೆ ಬಾ ಎಂದು ಕರೆದು ಆಕೆಯನ್ನು ಗರ್ಭಿಣಿ ಮಾಡಿರುವಂತಹ ಅಘಾತಕಾರಿ ಘಟನೆ ಒಂದು ಬೆಳಕಿಗೆ ಬಂದಿದೆ.

 

ಹೌದು, ಯು.ಪಿ.ಎಸ್.ಸಿ. ಪರೀಕ್ಷೆ ಬರೆದು ಐ.ಎ.ಎಸ್ ಅಧಿಕಾರಿಯಾಗಬೇಕು ಎಂದುಕೊಂಡಿದ್ದ ಬಿಎಸ್ಸಿ ವಿದ್ಯಾರ್ಥಿನಿಯೊರ್ವಳು, ತಾನು ವಿದ್ಯಾಭ್ಯಾಸ ಮಾಡುತ್ತಿದ್ದ ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದವರನ್ನು ಹುಡುಕಾಡುತ್ತಿದ್ದಾಗ ಕ್ಲರ್ಕ್ ಒಬ್ಬನ ಬಲೆಗೆ ಬಿದ್ದಿದ್ದಾಳೆ. ಚಿಕ್ಕಬಳ್ಳಾಪುರ (Chikkaballapur) ಡಿಗ್ರಿ ಕಾಲೇಜಿನ ಕ್ಲರ್ಕ್​ ಭೀಮರಾಜ್ ಎಂಬಾತ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಗೈಡ್ ಮಾಡುವ ನೆಪದಲ್ಲಿ ಈ ವಿದ್ಯಾರ್ಥಿನಿಯನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ್ದಾನೆಂದು ಆರೋಪಿಸಲಾಗಿದ್ದು, ಈ ಸಂಬಂಧ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಪೊಲೀಸರು ಕ್ಲಕ್​ ಭೀಮರಾಜ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

 

ಈ ಸಂಬಂಧ ವಿದ್ಯಾರ್ಥಿನಿ ಈಗ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಕ್ಲರ್ಕ್​ ವಿರುದ್ಧ ಅತ್ಯಾಚಾರ ಪ್ರಕರಣ ದೂರು ದಾಖಲು ಮಾಡಿದ್ದಾಳೆ. ಇನ್ನೂ ಪೊಲೀಸರು ಆರೋಪಿ ಭೀಮರಾಜ್ ಬಿ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಆರೋಪಿ ತಾನು ಮಾಡಿದ ಪಾಪದ ಕೆಲಸ ಒಪ್ಪಿಕೊಂಡಿದ್ದಾನಂತೆ. ಇದರಿಂದ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

 

ಮತ್ತೊಂದೆಡೆ ಆರೋಪಿಗೆ ಮದುವೆಯಾಗಿ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಪತ್ನಿ ಚಿಕ್ಕಬಳ್ಳಾಪುರದ ಸರ್ಕಾರಿ ಕಚೇರಿಯೊಂದರಲ್ಲಿ ಸರ್ಕಾರಿ ನೌಕರಳಾಗಿ ಕೆಲಸ ಮಾಡ್ತಿದ್ದಾಳೆ. ಹೀಗಿದ್ದರೂ ತನ್ನದೆ ಕಾಲೇಜಿನ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಅತ್ಯಾಚಾರ ಮಾಡಿ ಆಕೆ ವಿದ್ಯಾಬ್ಯಾಸಕ್ಕೆ ಮುಳ್ಳಾಗಿದ್ದಾನೆ.

Comments are closed.