Darshan: ʼಸ್ಯಾಂಡಲ್‌ವುಡ್‌ ಕ್ರಿಮಿನಲ್‌ ದರ್ಶನ್‌ʼ – ತೆಲುಗು ನೆಟ್ಟಿಗರಿಂದ ಡಿ ಬಾಸ್‌ ಸಿಕ್ಕಾಪಟ್ಟೆ ಟ್ರೋಲ್, ಮತ್ತೆ ಶುರುವಾಯ್ತು ಫ್ಯಾನ್ಸ್ ವಾರ್

Share the Article

Darshan: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಅವರು ಸದ್ಯ ಜಾಮೀನ ಮೇಲೆ ಹೊರಗಿದ್ದಾರೆ. ಅಲ್ಲದೆ ಇದೀಗ ಅವರು ಡೆವಿಲ್ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಸದ್ಯ ದರ್ಶನವರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ.

ಹೌದು, ಇದೀಗ ಕ್ರಿಮಿನಲ್‌ ದರ್ಶನ್‌ ಎಂಬ ಪದ ಮಾಜಿಕ ಜಾಲತಾಣದಲ್ಲಿ ಭಾರೀ ಟ್ರೆಂಡ್‌ ಆಗುತ್ತಿದೆ. ಅಂದಹಾಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ದರ್ಶನ್‌ ಕುರಿತು ಪವನ್‌ ಕಲ್ಯಾಣ್‌ ಅಭಿಮಾನಿಯೊಬ್ಬ ದರ್ಶನ್‌ ಆರೋಪಿಯಂತೆ ಹಾಗೂ ಪವನ್‌ ಕಲ್ಯಾಣ್‌ ಪೊಲೀಸ್‌ ವಸ್ತ್ರದಲ್ಲಿರುವ ಫೋಟೊಗಳನ್ನು ಹಂಚಿಕೊಂಡು ಟ್ರೋಲ್‌ ಮಾಡಿದ್ದ. ಇದಕ್ಕೆ ಪ್ರತ್ಯುತ್ತರವಾಗಿ ದರ್ಶನ್‌ ಅಭಿಮಾನಿಗಳು ಪವನ್‌ ಕಲ್ಯಾಣ್‌ ಟ್ರೋಲ್‌ ಮಾಡಲಾರಂಭಿಸಿದ್ದಾರೆ.

ಹೀಗೆ ಶುರುವಾದ ಫ್ಯಾನ್‌ ವಾರ್‌ ಸದ್ಯ ಎಕ್ಸ್‌ನಲ್ಲಿ ಟ್ರೆಂಡಿಂಗ್‌ ಪಟ್ಟಿಗೇರುವ ಮಟ್ಟಕ್ಕೆ ತಲುಪಿದೆ. ಪವನ್‌ ಕಲ್ಯಾಣ್‌ ಅಭಿಮಾನಿಗಳ ಜೊತೆಗೆ ಇತರೆ ತೆಲುಗು ನಟರ ಅಭಿಮಾನಿಗಳೂ ಸಹ ದರ್ಶನ್‌ ಟ್ರೋಲ್‌ ಮಾಡಿದ್ದು, ʼಕೆಎಫ್‌ಐ ಕ್ರಿಮಿನಲ್‌ ದರ್ಶನ್‌ʼ ಹ್ಯಾಷ್‌ಟ್ಯಾಗ್‌ ಅಡಿಯಲ್ಲಿ 1,04,000 ಟ್ವೀಟ್‌ಗಳನ್ನು ಮಾಡಿದ್ದಾರೆ.

ಇದನ್ನೂ ಓದಿ: Suicide: ಗಂಗೊಳ್ಳಿ: ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ!

Comments are closed.