Toxic: ‘ಟಾಕ್ಸಿಕ್’ ಚಿತ್ರದಿಂದ ರವಿ ಬಸ್ರೂರು ಔಟ್? ಅವರ ಬದಲು ಇವರು…

Share the Article

Toxic: ಭಾರಿ ಕುತೂಹಲ ಕೆರಳಿಸಿರುವ ಯಶ್ ಅಭಿನಯದ ಟಾಕ್ಸಿಕ್ ಚಿತ್ರ ರಾಜ್ಯಾದ್ಯಂತ ಹೊಸ ಸಂಚಲನ ಸೃಷ್ಟಿಸುತ್ತಿದೆ. ಟೀಸರ್ ಬಿಡುಗಡೆ ಯಾದಗಿನಿಂದಲೂ ಅಭಿಮಾನಿಗಳಲ್ಲಿ ಈ ಚಿತ್ರ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ಆದರೆ ಇದೀಗ ಈ ಚಿತ್ರದಿಂದ ಸಂಗೀತ ಸಂಯೋಜಕ ರವಿ ಬಸ್ರೂರು ಅವರು ಆಗಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿದೆ.

ಹೌದು, ಹೌದು, ಅಸಲಿಗೆ 2023ರ ಡಿಸೆಂಬರ್‌ನಲ್ಲಿ ಈ ಚಿತ್ರದ ಘೋಷಣೆಯಾದಾಗ ಯುಕೆ ಮೂಲದ ಸಂಗೀತ ನಿರ್ದೇಶಕ ‘ಜೆರಮಿ ಸ್ಟಾಕ್’ ಚಿತ್ರದ ಅನೌನ್ಸ್‌ಮೆಂಟ್ ವಿಡಿಯೋಗೆ ಸಂಗೀತವನ್ನು ನೀಡಿದ್ದರು. ಈ ಸಂಗೀತವನ್ನು ಕೇಳಿ ಅನೇಕರು ಇದು ಕನ್ನಡದ ಸಂಗೀತ ನಿರ್ದೇಶಕ ‘ಚರಣ್ ರಾಜ್’ ಅವರದ್ದೇ ಕೆಲಸ ಎಂದು ಅಂದುಕೊಂಡಿದ್ದರು. ಹೀಗಾಗಿ ಜೆರಮಿ ಸ್ಟಾಕ್ ತಮ್ಮ ಇನ್‌ಸ್ಟಾಗ್ರಾಮ್ ಮೂಲಕ ಈ ಕುರಿತು ಸ್ಪಷ್ಟನೆ ನೀಡಿದ್ದರು. ಟಾಕ್ಸಿಕ್ ಚಿತ್ರಕ್ಕೆ ಸಂಗೀತ ನೀಡಿದ್ದು ನಾನು ಎಂದು ಹೇಳಿದ್ದರು. ಆದರೆ ಈಗ ರವಿ ಬಸ್ರೂರ್ ಅವರ ಜಾಗಕ್ಕೆ ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ದ್ ರವಿಚಂದ್ರನ್ ಅವರ ಪ್ರವೇಶವಾಗಿದೆ ಎನ್ನುವ ಸುದ್ದಿ ಸದ್ಯ ಗುಲ್ಲಾಗಿದೆ.

ಅಂದಹಾಗೆ ಈ ಮೊದಲು ತಮಿಳಿನಲ್ಲಿ ರಿಲೀಸ್ ಆಗಿ ಹಿಟ್ ಆದ ‘ಜೈಲರ್’ ಚಿತ್ರಕ್ಕೆ ಮ್ಯೂಸಿಕ್ ಕೊಟ್ಟಿದ್ದು ಅನಿರುದ್ಧ್ ಅವರೇ. ಈ ಹಾಡುಗಳು ಗಮನ ಸೆಳೆದವರು. ಚಿತ್ರದ ಬಿಜಿಎಂ ಕೂಡ ಪ್ರೇಕ್ಷಕರಿಂದ ಹೆಚ್ಚಿನ ಅಂಕ ಪಡೆಯಿತು. ಅನಿರುದ್ಧ್ ಅವರು ಈ ರೀತಿಯ ಹಲವು ಹಿಟ್ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರನ್ನು ‘ಟಾಕ್ಸಿಕ್’ ಚಿತ್ರಕ್ಕೆ ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಚಿತ್ರತಂಡ ಈ ವಿಚಾರಕ್ಕೆ ಸಂಬಂಧಿಸಿದಂತೆ ಸದ್ಯ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲವಾದರು ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಚರ್ಚೆ ನಡೆಯುತ್ತಿದೆ.ಶೀಘ್ರದಲ್ಲಿಯೇ ಈ ಕುರಿತು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಲಿದೆ ಎಂದು ಕೂಡ ಹೇಳಲಾಗುತ್ತಿದೆ.

ಇದನ್ನೂ ಓದಿ: Kodagu Rain: ಕೊಡಗು ಜಿಲ್ಲೆಯಲ್ಲಿ ಮಳೆ ಹೇಗಿದೆ? ಹಾರಂಗಿ ಜಲಾಶಯದ ನೀರಿನ ಮಟ್ಟ ಎಷ್ಟಿದೆ?

Comments are closed.