Udupi: ಮದುವೆ ನೆಪದಲ್ಲಿ ಅತ್ಯಾಚಾರ, ವಂಚನೆ: ಆರೋಪಿ ಅರೆಸ್ಟ್!

Share the Article

Udupi: ಅರೇಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೇ, ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಉಡುಪಿಯ ಕೊಳಲಗಿರಿಯ ನರ್ನಾಡುಗುಡ್ಡೆ ಗ್ರಾಮದ ಲಕ್ಷ್ಮೀನಗರ ನಿವಾಸಿ ಸಂಜಯ್ ಕರ್ಕೇರ (28) ಎಂದು ಗುರುತಿಸಲಾಗಿದೆ.

ಆರೋಪಿ ಸಂಜಯ್ ಹಾಗೂ ಕೊಳಲಗಿರಿ ಗ್ರಾಮದ ಯುವತಿ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅದರಂತೆ ಜು. 11, 2024 ರಲ್ಲಿ ಆರೋಪಿಯು ಯುವತಿಯನ್ನ ಚಿಕ್ಕಮಗಳೂರು ಜಿಲ್ಲೆಯ ಕಳಸಕ್ಕೆ ಸುತ್ತಾಡಲು ಬಂದಿದ್ದರು. ಈ ವೇಳೆ ಚಾರಣಕ್ಕೆಲ್ಲ ಹೋಗಿ ಬಂದು ಆಕೆಗೆ ಜ್ಯೂಸ್ ನಲ್ಲಿ ಮತ್ತು ಬರುವ ಔಷಧ ನೀಡಿ ಆಕೆ ಅರೇಪ್ರಜ್ಞಾವಸ್ಥೆಗೆ ತಲುಪುತ್ತಿದ್ದಂತೆ ಆಕೆಯೊಂದಿಗೆ ದೈಹಿಕ ಸಂಪರ್ಕ ಮಾಡಿದ್ದಾನೆ. ಈ ಬಗ್ಗೆ ತಿಳಿದಾಗ ಯುವತಿ ಗಲಾಟೆ ಮಾಡಿದ್ದಾಳೆ, ಈ ವೇಳೆ ನಿನ್ನನ್ನೇ ಮದುವೆಯಾಗುವುದಾಗಿ ಹೇಳಿ ಶೃಂಗೇರಿಯ ದೇವಾಲಯಕ್ಕೆ ಕರೆದೊಯ್ದು ಹಣೆಗೆ ಕುಂಕುಮ ಇಟ್ಟು ಹಾರ ಹಾಕಿದ್ದ, ಅಲ್ಲದೆ ಮನೆಯವರನ್ನು ಒಪ್ಪಿಸಿ ಅದ್ದೂರಿಯಾಗಿ ಮದುವೆಯಾಗೋಣ ಎಂದು ನಂಬಿಸಿದ್ದ.

ಈ ಘಟನೆಯಾದ ಬಳಿಕ ಸಂತ್ರಸ್ತ ಯುವತಿಯ ಬಳಿ ಮದುವೆಯಾಗುವಾಗಿ ಹೇಳಿ ಹಲವಾರು ಬಾರಿ ಅತ್ಯಾಚಾರ ಎಸೆಗಿದ್ದ ಎನ್ನಲಾಗಿದೆ. ಇದೀಗ ದಿಡೀರ್ ಆಗಿ ಬೇರೊಂದು ಯುವತಿಯ ಜೊತೆ ಮದುವೆ ನಿಶ್ಚಯವಾಗುತ್ತಿದ್ದಂತೆ, ಸಂತ್ರಸ್ತೆ ಈ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಪೋಷಕರು ಸಂಜಯ್ ವಿರುದ್ಧ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರಂತೆ ಇದೀಗ ಆರೋಪಿ ಸಂಜಯ್ ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸದ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಇದನ್ನೂ ಓದಿ: Railway station: ಚಾಕು, ಹೇರ್‌ಪಿನ್ ಬಳಸಿ ರೈಲ್ವೆ ನಿಲ್ದಾಣದಲ್ಲೇ ಹೆರಿಗೆ ಮಾಡಿಸಿದ ಸೇನಾ ವೈದ್ಯ!!

Comments are closed.