Renu Desai: ಸದ್ಯದಲ್ಲೇ ಮತ್ತೆ 2ನೇ ಮದುವೆಯಾಗುತ್ತೇನೆ – ಪವರ್ ಸ್ಟಾರ್ ಪತ್ನಿಯ ಅಚ್ಚರಿ ಹೇಳಿಕೆ

Share the Article

Renu Desai: ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಅವರು ನಾನು ಸದ್ಯದಲ್ಲೇ ಮತ್ತೆ ಮದುವೆಯಾಗುತ್ತೇನೆ ಇಂದು ಹೇಳಿಕೆ ನೀಡುವುದರ ಮೂಲಕ ಸದ್ಯ ಸುದ್ದಿಯಾಗುತ್ತಿದ್ದಾರೆ.

ಹೌದು, ರೇಣು ದೇಸಾಯಿ ಪವನ್ ಕಲ್ಯಾಣ್ ಅವರಿಂದ ಬೇರ್ಪಟ್ಟು ಸುಮಾರು 13 ವರ್ಷಗಳಾಗಿವೆ. ಅವರು ಇನ್ನೂ ಒಂಟಿಯಾಗಿದ್ದಾರೆ. ಅವರು ತಮ್ಮ ಮಗ ಅಕಿರಾ ನಂದನ್ ಮತ್ತು ಮಗಳು ಆಧ್ಯಾಳನ್ನು ನೋಡಿಕೊಳ್ಳುತ್ತಾ ಒಂಟಿ ಜೀವನ ನಡೆಸುತ್ತಿದ್ದಾರೆ. ಇದೀಗ ಅವರು ಎರಡನೇ ಮದುವೆ ಬಗ್ಗೆ ಪ್ರಸ್ತಾಪಿಸಿದ್ದು, ʼಎರಡನೇ ಮದುವೆಯಾಗಲು ಸಿದ್ಧಳಾಗಿದ್ದೇನೆ.. ಆದರೆ ಇಲ್ಲಿ ಒಂದು ಸಣ್ಣ ತಿರುವು ಇದೆ. ಮದುವೆಯಾಗಲು ಇನ್ನೂ ಕೆಲವು ದಿನ ಬೇಕುʼ ಎಂದಿದ್ದಾರೆ. ಮುಂದಿನ ಎರಡು ಮೂರು ವರ್ಷಗಳಲ್ಲಿ ಖಂಡಿತವಾಗಿಯೂ ಮದುವೆಯಾಗುವುದಾಗಿ ರೇಣು ದೇಸಾಯಿ ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ ʼಮಕ್ಕಳ ಹಿತದೃಷ್ಟಿಯಿಂದ ನಾನು ಮದುವೆಯಾಗಲಿಲ್ಲ.. ಒಂದು ಸಮಯದಲ್ಲಿ ಮದುವೆಯಾಗಲು ರೆಡಿಯಾಗಿ ನಿಶ್ಚಿತಾರ್ಥವೂ ಆಗಿತ್ತು.. ಆದರೆ ಅದು ಕಾರಣಂತಾರಗಳಿಂದ ರದ್ದಾಯಿತು.. ಆದರೆ ಆ ಸಮಯದಲ್ಲಿ, ನನ್ನ ಮಕ್ಕಳಾದ ಅಕಿರಾ ಮತ್ತು ಆದ್ಯ ಇನ್ನೂ ಚಿಕ್ಕವರಾಗಿದ್ದರು. ಅವರಿಗೆ ಆರೈಕೆದಾರರ ಅಗತ್ಯವಿತ್ತು.. ಒಂದೊಳ್ಳೆ ಒಡನಾಟದ ಅಗತ್ಯವಿತ್ತು. ನಾನು ಮದುವೆಯಾದರೇ ನನ್ನ ಮಕ್ಕಳು ಒಂಟಿಯಾಗುತ್ತಾರೆ.. ಏಕೆಂದರೇ ತಂದೆ ಈಗಾಗಲೇ ದೂರವಾಗಿದ್ದಾರೆ.. ನಾನೂ ಕೂಡ ಹೊರಟು ಹೋದರೆ, ಅವರು ಒಂಟಿತನದ ಭಾವನೆಯನ್ನು ಎದುರಿಸಬೇಕಾಗುತ್ತದೆ ಎಂದು ಮದುವೆ ಮುಂದೂಡಿದ್ದೇನೆ ಎನ್ನುತ್ತಾರೆ ರೇಣು ದೇಸಾಯಿ.

ಇದನ್ನೂ ಓದಿ: Bantwala: ಬಂಟ್ವಾಳ: ಯುವತಿಗೆ ಹಲ್ಲೆ ಮಾಡಿ ಆಕೆಯ ಮನೆಯಲ್ಲೇ ಯುವಕ ಆತ್ಮಹತ್ಯೆ!

Comments are closed.