Chikkaballapura: ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ ‘ಐ ಲವ್ ಯು’ ಎಂದು ಮೆಸೇಜ್ ಮಾಡಿದ PDO – ಮುಂದೇನಾಯ್ತ?

Share the Article

 

Chikkaballapura : ಗ್ರಾಮ ಪಂಚಾಯಿತಿಯ ಅಧ್ಯಕ್ಷತೆಗೆ ಪಿಡಿಒ ಒಬ್ಬ ಐ ಲವ್ ಯು ಎಂದು ಮೆಸೇಜ್ ಮಾಡಿ ಸಿಕ್ಕಿಬಿದ್ದ ಪ್ರಕರಣ ಒಂದು ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆದಿದೆ.

 

ಚಿಕ್ಕಬಳ್ಳಾಪುರ ಜಿಲ್ಲೆಯ ರಾಶ್ಚೆರುವು ಗ್ರಾಮ ಪಂಚಾಯಿತಿಯಲ್ಲಿ ಈ ವಿದ್ಯಮಾನ ನಡೆದಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ ಪಿಡಿಓ ಅಶ್ಲೀಲ ಮೆಸೇಜ್‌ ಕಳುಹಿಸಿ ನಾನು ನಿನ್ನ ಪ್ರೀತಿಸುತ್ತೇನೆ ಎಂದು ಮೆಸೇಜ್ ಮಾಡಿದ್ದಾನೆ. ಸದ್ಯ ಈ ಪ್ರಕರಣದ ಕುರಿತು ಇದೀಗ ದೂರು ದಾಖಲಾಗಿದೆ.

 

ಅಂದಹಾಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ ಮದುವೆಯಾಗಿದ್ದು, ಪಿಡಿಓ ಅಶೋಕ್‌ಗೂ ಕೂಡ ಮದುವೆಯಾಗಿದೆ. ಆದರೂ ಕೂಡ ಅಶೋಕ್‌ ತಮ್ಮ ಪಂಚಾಯಿತಿ ಅಧ್ಯಕ್ಷೆಗೆ I LOVE YOU ನಿನ್ನ ಪ್ರೀತಿಸುತ್ತೇನೆ ಎಂದು ಮೆಸೇಜ್​ ಕಳುಹಿಸಿದ್ದಾರೆ ಎನ್ನಲಾಗಿದೆ.

 

ಇಷ್ಟೇ ಅಲ್ಲದೆ ಪಿಡಿಓ ಅಶೋಕ್‌ ಹಾಗೂ ಮಾಜಿ ಅಧ್ಯಕ್ಷೆಯ ಪತಿ ಎ.ಎನ್ ಬಾಬು ರೆಡ್ಡಿ, ಹಾಲಿ ಸದಸ್ಯ ನಾಗೇಶ್ ಹಾಗೂ ಭಾನು ಪ್ರಕಾಶ್ ಎನ್ನುವವರು ಖಾಲಿ ಚೆಕ್​ಗಳಿಗೆ ಸಹಿ ಹಾಕುವಂತೆ​ ಬೆದರಿಕೆ ಹಾಕಿರುವುದಲ್ಲದೇ ಜಾತಿ ನಿಂದನೆ ಮಾಡಿದ್ದಾರೆ ಎಂದು ರಾಶ್ಚೆರುವು ಗ್ರಾಮ ಪಂಚಾಯಿತಿ ಹಾಲಿ ಅಧ್ಯಕ್ಷೆ ದೂರು ನೀಡಿದ್ದಾರೆ.

Comments are closed.