Nelamangala: ಗಾಣಿಗ ಮಠಕ್ಕೆ ಅನುದಾನ ಬಿಡುಗಡೆ ಮಾಡಲು ಕಮಿಷನ್ ಕೇಳಿದ ಸಚಿವ? ಮಿನಿಸ್ಟರ್ ಶಿವರಾಜ್ ತಂಗಡಗಿ ವಿರುದ್ಧ ಸ್ವಾಮೀಜಿ ಗಂಭೀರ ಆರೋಪ


Nelamangala : ನೆಲಮಂಗಲದ ಶ್ರಿಕ್ಷೇತ್ರ ತೈಲೇಶ್ವರ ಗಾಣಿಗರ ಮಹಸಂಸ್ಥಾನ ಮಠದ ಪೂರ್ಣಾನಂದಪೂರಿ ಸ್ವಾಮೀಜಿ ತಮ್ಮ ಮಠಕ್ಕೆ ಅನುದಾನ ಬಿಡುಗಡೆ ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಶಿವರಾಜ್ ತಂಗಡಗಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಹೌದು, ಶ್ರೀ ಮಠದ ಜೀರ್ಣೋದ್ಧಾರಕ್ಕಾಗಿ 3.5 ಕೋಟಿ ರೂ. ಅನುದಾನ ಮಂಜೂರಾಗಿದೆ. ಮಂಜೂರಾದ ಅನುದಾನ ಬಿಡುಗಡೆ ಮಾಡಲು ಸಚಿವ ಶಿವರಾಜ್ ತಂಗಡಗಿಯವರು 25 ಪರ್ಸೆಂಟ್ ಕಮಿಷನ್ ಕೇಳಿದ್ದಾರೆ ಎಂದು ಸ್ವಾಮೀಜಿ ಆರೋಪ ಮಾಡಿದ್ದಾರೆ. ಹೀಗಾಗಿ, ಶಿವರಾಜ ತಂಗಡಗಿಯವರನ್ನು ಸಚಿವ ಸಂಪುಟದಿಂದ ಕೈ ಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯವರಿಗೆ ಪೂರ್ಣಾನಂದಪೂರಿ ಸ್ವಾಮೀಜಿ ಪತ್ರ ಬರೆದಿದ್ದಾರೆ.
ಸ್ವಾಮೀಜಿಯವರು ಪತ್ರದಲ್ಲಿ ಸಿಎಂ ಸಿದ್ದರಾಮಯ್ಯನವರೇ..ತಾವು ಹಿಂದುಳಿದ ವಿವಿಧ ಸಂಘ ಸಂಸ್ಥೆಗಳಿಗೆ ಅಭಿವೃದ್ಧಿಗೆ ಉದಾರವಾಗಿ ಅನುದಾನ ನೀಡಿತ್ತಿರುವುದಕ್ಕೆ ಧನ್ಯವಾದಗಳು.ಆದರೆ,ಸಚಿವ ಶಿವರಾಜ್ ತಂಗಡಗಿ ಅದಕ್ಕೆ ಅಡ್ಡಿಯಾಗಿದ್ದಾರೆ. ಕಾನೂನು ಬದ್ಧವಾಗಿ ಅನುಮೋದಿಸಲ್ಪಟ್ಟ ಸಂಸ್ಥೆಗಳಿಗೆ ಅನುದಾನ ನೀಡುವ ಕಡತಗಳನ್ನು ಸಚಿವರು ತಮ್ಮಲ್ಲಿಯೇ ತರಿಸಿಕೊಂಡು ತಮಗೆ ಬೇಕಾದವರಿಗೆ ಹಂಚಿಕೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಅಲ್ಲದೆ ಈ ವಿಷಯ ನಿಮ್ಮ ಗಮನಕ್ಕೆ ಬಂದ ನಂತರ ಮುಂದಿನ 10 ದಿನಗಳಲ್ಲಿ ನೀವು ಯಾವುದೇ ಕ್ರಮ ಕೈಗೊಳ್ಳದಿದ್ದರೆ ಮಂತ್ರಿಗಳ ವಿರುದ್ಧ ಬ್ರಷ್ಟಾಚಾರ ನಿಗ್ರಹದಡಿ ಕಾನೂನು ಹೋರಾಟ ಮಾಡಲು ಮುಂದಾಗಲಿದ್ದೇವೆ ಎಚ್ಚರಿಕೆ ನೀಡಿದ್ದಾರೆ.
Comments are closed.