Tumakuru : ತುಮಕೂರಿನ ಲಾಡ್ಜ್ ನಲ್ಲಿ ನೇಣು ಬಗೆದು ಆತ್ಮಹತ್ಯೆ ಮಾಡಿಕೊಂಡ ದಾವಣಗೆರೆಯ PSI – ಡೆತ್ ನೋಟ್ ಪತ್ತೆ

Tumakuru : ತುಮಕೂರಿನ ಲಾಡ್ಜ್ ವೊಂದರಲ್ಲಿ ದಾವಣಗೆರೆಯ ಪಿಎಸ್ ಐ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಹೌದು, ದಾವಣಗೆರೆ ಬಡಾವಣೆಯ ಠಾಣೆಯ ಪಿಎಸ್ ಐ 35 ವರ್ಷದ ನಾಗರಾಜು ತುಮಕೂರಿನ ದ್ವಾರಕ ಹೋಟೆಲ್ ಲಾಡ್ಜ್ ನಲ್ಲಿ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಂದಹಾಗೆ ಆತ್ಮಹತ್ಯೆಗೆ ಶರಣಾದ ಪಿಎಸ್ ಐ ಜುಲೈ 1 ರಂದು ದ್ವಾರಕ ಹೋಟೆಲ್ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿದ್ದರು. ಇಂದು ಲಾಡ್ಜ್ ನಲ್ಲಿ ದುರ್ವಾಸನೆ ಬಂದಿದ್ದು, ಸಿಬ್ಬಂದಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಇಂದು ಲಾಡ್ಜ್ ನಲ್ಲಿ ದುರ್ವಾಸನೆ ಬಂದಿದೆ. ಬಳಿಕ ಲಾಡ್ಜ್ ಸಿಬ್ಬಂದಿ ಹೋಗಿ ನೋಡಿದಾಗ ಇನ್ಸ್ ಪೆಕ್ಟರ್ ಆತ್ಮಹತ್ಯೆಗೆ ಮಾಡಿಕೊಂಡಿರುವುವುದು ಬೆಳಕಿಗೆ ಬಂದಿದೆ. ದಾವಣಗೆರೆ ತಾಲೂಕಿನ ಜವಳಘಟ್ಟ ಗ್ರಾಮದ ನಿವಾಸಿಯಾಗಿದ್ದ ನಾಗರಾಜಪ್ಪ, ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆಗಿದ್ದರು. ಆದ್ರೆ, ಇದೀಗ ನಾಗರಾಜ ಅವರು ದಾವಣಗೆರೆಯಿಂದ ಬಂದು ತಮಕೂರಿನ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದೇಕೆ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ನಾಗರಾಜ ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿರುವ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಪೊಲೀಸರು ತನಿಕೆ ಕೈಗೊಂಡಿದ್ದಾರೆ. ಬಳಿ ಆ ಡೆತ್ ನೋಟ್ ನಲ್ಲಿ ಏನೆಲ್ಲಾ ಬರೆದಿದ್ದಾರೆ ಎನ್ನುವುದು ತಿಳಿದುಬರಬೇಕಿದೆ.
Comments are closed.