Puttur: ಪುತ್ತೂರು ತಾಲೂಕಿನ 18 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ಕಲಿಕೆಗೆ ಆದೇಶ!

Puttur: 2025-26ನೇ ಶೈಕ್ಷಣಿಕ ವರ್ಷದಿಂದ, ಪುತ್ತೂರಿನ 18 ಸೇರಿ ದಕ್ಷಿಣ ಕನ್ನಡ ಜಿಲ್ಲೆಯ 115 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶುರುವಾಗಲಿದೆ. ರಾಜ್ಯದ ಒಟ್ಟು 4,134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇತರ ಮಾಧ್ಯಮಗಳ ಜೊತೆಗೆ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಹೊಸದಾಗಿ ಪ್ರಾರಂಭಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ 115 ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ.ಅದರಂತೆ, ಸರಕಾರಿ ಹಿ ಪ್ರಾ ಶಾಲೆ ಕೈಕಾರ, ನರಿಮೊಗರು, ಭಕ್ತಕೋಡಿ, ಕೆಮ್ಮಾಯಿ, ಪೆರ್ಲಂಪಾಡಿ, ನೆಟ್ಟಣಿಗೆ, ಮುಡನೂರು, ಪಾಪಪಂಜಲು, ಮುಂಡೂರು, ಪಾಣಾಜೆ, ವಿಟ್ಲ ಚಂದಳಿಕೆ,ಕೆದಿಲ, ಪಾಟ್ರಿ ಕೋಡಿ ಹಾಗೂ ಬೊಳಂತಿಮೊಗ್ರು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗೆ ಸರಕಾದ ಅನುಮತಿ ನೀಡಿದೆ.
2019ರಿಂದ 2024ರವರೆಗೆ ಜಿಲ್ಲೆಯಲ್ಲಿ ಒಟ್ಟು 120 ಶಾಲೆಗಳಲ್ಲಿ ದ್ವಿಭಾಷಾ ಶಿಕ್ಷಣವನ್ನು ಸರ್ಕಾರ ಅನುಮೋದಿಸಿತ್ತು. ಇತ್ತೀಚೆಗೆ ಇನ್ನೂ ಮೂರು ಶಾಲೆಗಳನ್ನು ಸೇರಿಸಲಾಗಿದ್ದು, ಇದರೊಂದಿಗೆ ದ.ಕ.ದಲ್ಲಿ ದ್ವಿಭಾಷಾ ಮಾಧ್ಯಮ ಬೋಧನೆಯನ್ನು ನೀಡುವ ಒಟ್ಟು ಶಾಲೆಗಳ ಸಂಖ್ಯೆ 123ಕ್ಕೇರಿದೆ.
Comments are closed.