Mangaluru: ಮಕ್ಕಳು ಡ್ರಗ್ ಅಡಿಕ್ಟ್ ಆಗಿದ್ದಾರೆಂದು ಪೋಷಕರಿಂದಲೇ ಪೊಲೀಸರಿಗೆ ದೂರು !! ಮುಂದೆ ನಡೆದದ್ದೇಲ್ಲವೂ ವಿಚಿತ್ರ

Share the Article

Mangaluru : ಮಕ್ಕಳು ಡ್ರಗ್ ಅಡಿಕ್ಟ್ ಆಗಿದ್ದಾರೆಂದು ಪೋಷಕರೇ ಪೊಲೀಸರಿಗೆ ದೂರು ನೀಡಿದ ಅಚ್ಚರಿಯ ವಿದ್ಯಮಾನ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ (Mangalore) ನಡೆದಿದೆ.

ಹೌದು, ಮಂಗಳೂರಿನಲ್ಲಿ ಬೃಹತ್ ಡ್ರಗ್ಸ್ ಮಾರಾಟದ ಜಾಲವನ್ನು ಪೊಲೀಸರು ಇದೀಗ ಭೇದಿಸಿದ್ದಾರೆ. ತಮ್ಮ ಮಕ್ಕಳ ಡ್ರಗ್ಸ್ ಅಡಿಕ್ಟ್ ಬಗ್ಗೆ ಇಬ್ಬರು ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರ ಪರಿಣಾಮ ಮಾತ್ರ ಒಳಿತೇ ಆಗಿದೆ. ನೂರಾರು ವಿದ್ಯಾರ್ಥಿಗಳಿಗೆ, ಮಕ್ಕಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಜಾಲವೇ ಪೊಲೀಸ್ ಬಲೆಗೆ ಬಿದ್ದಿದೆ.

ಬಂಧಿತರನ್ನು ಮಂಗಳೂರು ನಿವಾಸಿಗಳಾದ ತುಷಾರ್ (21), ಧನ್ವಿ ಶೆಟ್ಟಿ (20), ಸಾಗರ್ ಕರ್ಕೇರಾ (19), ವಿಕಾಸ್ ಥಾಪ (23), ವಿಘ್ನೇಶ್ ಕಾಮತ್ (24) ಎಂದು ಗುರುತಿಸಲಾಗಿದೆ. ಜುಲೈ 2 ರಂದು ಸೆನ್ ಪೊಲೀಸ್ ಠಾಣೆಗೆ ಬಂದ ಮಾಹಿತಿಯ ಮೇರೆಗೆ ಮಂಗಳೂರಿನ ಪಡುಶೆಡ್ಡೆ ಗ್ರಾಮದ ಹಾಲಾಡಿ ಎಂಬ ಸ್ಥಳದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ತಯಾರಿ ನಡೆಸುತ್ತಿರುವ ವೇಳೆಗೆ ದಾಳಿ ಮಾಡಿ ಪ್ರತಿಯೊಬ್ಬರ ಬಳಿ 1 ಕೆ.ಜಿ ಗಿಂತ ಹೆಚ್ಚಿನ ಪ್ರಮಾಣದ ಗಾಂಜಾವನ್ನು ಹಾಗೂ ಗಾಂಜಾ ಪ್ಯಾಕೇಟ್ ಸೇರಿದಂತೆ ಒಟ್ಟು 5.7 ಕೆ.ಜಿ ತೂಕದ ರೂ 5,20,000/- ಮೌಲ್ಯದ ನಿಷೇಧಿತ ಮಾದಕ ವಸ್ತುವಾದ ಗಾಂಜಾ ಮತ್ತು ಆರೋಪಿತರು ಕೃತ್ಯಕ್ಕೆ ಬಳಸಿದ 06- ಮೊಬೈಲ್ ಫೋನ್, 1- ದ್ವಿಚಕ್ರ ವಾಹನ ವನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಗಾಂಜಾವನ್ನು ಚಿಕ್ಕ ಚಿಕ್ಕ ಪ್ಯಾಕೆಟ್ ಮಾಡಿ ಮಂಗಳೂರು ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಪ್ಯಾಕೆಟ್ಗೆ 1000 ರೂ.ನಂತೆ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳಿಗೆ ಗಾಂಜಾ ಪೂರೈಕೆಯಾಗಿದ್ದು ಎಲ್ಲಿಂದ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನು ಸಾರ್ವಜನಿಕರು ಖಚಿತ ಮಾಹಿತಿ ಕೊಟ್ಟರೆ ಮಂಗಳೂರಿನಲ್ಲಿ ಎಲ್ಲಿಯೂ ಸಹ ಡ್ರಗ್ಸ್ ಸಿಗದಂತೆ ಮಾಡಬಹುದು. ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು. ಯಾರೇ ಡ್ರಗ್ಸ್ ಅಡಿಕ್ಟ್ ಆಗಿದದರ ಅವರನ್ನು ಸಂತ್ರಸ್ತರು ಎಂದು ಪರಿಗಣಿಸುತ್ತೇವೆ. ಅವರಿಗೆ ಪೂರೈಕೆ ಮಾಡುತ್ತಿದ್ದವರನ್ನು ಬಂಧಿಸಿ ಜೈಲಿಗೆ ಕಳುಹಿಸುತ್ತೇವೆ ಎಂದು ಪೊಲೀಸ್ ಆಯುಕ್ತರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Heart Problem: ಹೃದಯ ಸಮಸ್ಯೆ ಇರುವವರಿಗೆ ಉಚಿತ ಚಿಕಿತ್ಸೆ ನೀಡುವ ಆಸ್ಪತ್ರೆ

Comments are closed.