Marriage: ಪ್ರೀತಿಸುತ್ತಿದ್ದ ಯುವತಿ ಜೊತೆ ಮದುವೆಯಾದವ ರಾತ್ರಿಯೇ ನೇಣಿಗೆ ಶರಣು

Share the Article

Marriage: ಮದುವೆಯಾದ ರಾತ್ರಿಯೇ ನವವಿವಾಹಿತ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದಾನೆ. ಸಬ್‌ ರಿಜಿಸ್ಟರ್‌ ಕಚೇರಿಯಲ್ಲಿ ಜುಲೈ 02 ರಂದು (ನಿನ್ನೆ) ಮದುವೆಯಾಗಿದ್ದ ಹರಿಶ್‌ ಬಾಬು ರಾತ್ರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಡೇಟಾ ಎಂಟ್ರಿ ಅಪರೇಟರ್‌ ಆಗಿ ಕೆಲಸ ಮಾಡುತ್ತಿದ್ದ ಹರೀಶ್‌ ಬಾಬು, ನಿನ್ನೆ ರಾತ್ರಿ ಇ.ಎನ್‌.ಟಿ ವಿಭಾಗದ ಕೊಠಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹರೀಶ್‌ ಬಾಬು ತಾನು ಪ್ರೀತಿಸಿ ಹುಡುಗಿ ಜೊತೆ ಮನೆ ಕಟ್ಟಿ ನಂತರ ಅದ್ಧೂರಿಯಾಗಿ ಮದುವೆಯಾಗಬೇಕೆಂಬ ಕನಸನ್ನು ಹೊಂದಿದ್ದ. ಆದರೆ ಏಕಾಏಕಿ ಮದುವೆಯಾಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿರಬಹುದು ಎನ್ನುವ ಆರೋಪವಿದೆ.

ಕೋಲಾರದ ಗಾಂಧಿನಗರ ಮೂಲದ ಯುವತಿ ಹಾಗೂ ಹರೀಶ್‌ ಬಾಬು ಪರಸ್ಪರ ಪ್ರೀತಿ ಮಾಡುತ್ತಿದ್ದು, ಯುವತಿ ಕೂಡಾ ಜಿಲ್ಲಾಸ್ಪತ್ರೆಯಲ್ಲಿಯೇ ಕೆಲಸ ಮಾಡುತ್ತಿದ್ದಳು. ಕುಟುಂಬಸ್ಥರ ಸಮ್ಮುಖದಲ್ಲಿ ಇಬ್ಬರಿಗೂ ಸಬ್‌ರಿಜಿಸ್ಟರ್‌ ಕಚೇರಿಯಲ್ಲಿ ಮದುವೆಯಾಗಿದ್ದರು. ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಕೊಠಡಿಗೆ ಬಂದಿದ್ದು, ಮದ್ಯ ಸೇವಿಸಿದ್ದಾನೆ. ನಂತರ ಅಲ್ಲೇ ಬ್ಯಾಂಡೇಜ್‌ ಬಟ್ಟೆಯಿಂದ ಕಿಟಕಿ ಕಂಬಿಗೆ ನೇಣು ಬಿಗಿದುಕೊಂಡಿದ್ದಾನೆ. ಮೂರು ದಿನಗಳಿಂದ ಆಸ್ಪತ್ರೆ ಕೆಲಸಕ್ಕೆ ರಜೆ ತೆಗೆದುಕೊಂಡಿದ್ದ ಆದರೆ ಕಳೆದ ರಾತ್ರಿ ಆಸ್ಪತ್ರೆಗೆ ಬಂದು ಸಾವಿಗೆ ಶರಣಾಗಿದ್ದಾನೆ.

ಮದ್ಯ ಸೇವಿಸಿ ತನ್ನ ಬಳಿ ಇದ್ದ ಮೊಬೈಲ್‌ ಫೋನ್‌ ಸಿಮ್‌ಕಾರ್ಡ್‌ ಮುರಿದು ಹಾಕಿದ್ದಾನೆ. ಇಂದು ಸಿಬ್ಬಂದಿ ಜಿಲ್ಲಾಸ್ಪತ್ರೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಜಿಲ್ಲಾಸ್ಪತ್ರೆಯ ಅಧಿಕಾರಿಗಳು ಕೋಲಾರ ನಗರ ಠಾಣೆಗೆ ದೂರು ನೀಡಲಾಗಿದೆ.

 

Comments are closed.