Mangalore: ಇನ್ಫೋಸಿಸ್‌ ಉದ್ಯೋಗಿ ಹೃದಯಾಘಾತದಿಂದ ಸಾವು

Share the Article

Mangalore: ಅಡ್ಯಾರ್‌ ಕಣ್ಣೂರು ಗಾಣದಬೆಟ್ಟು ನಿವಾಸಿ ಮುಹಮ್ಮದ್‌ ಹಾಶೀರ್‌ (32) ಇಂದು ಬೆಳಗ್ಗೆ ಕೇರಳದ ವಯನಾಡಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಮೃತ ಮಹಮ್ಮದ್‌ ಹಾಶೀರ್‌ ಮಂಗಳೂರಿನ ಪ್ರಕಾಶ್‌ ಬೀಡಿ ಉದ್ಯಮಿ ಜಿ.ಬಿ ಹಸನಬ್ಬ ಹಾಗೂ ಮುಲಾರಪಟ್ಣ ಮರ್ಹೂಮ್‌ ಹಸನ್‌ ಮುಸ್ಲಿಯಾರ್‌ ಅವರ ಮಗಳ ಹಿರಿಯ ಮಗ. ಇವರು ಕೇರಳದ ವಯನಾಡ್‌ನಲ್ಲಿ ಇನ್ಫೋಸಿಸ್‌ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು.

ಮೃತರು ಪತ್ನಿ, ಒಂದು ವರ್ಷದ ಹೆಣ್ಣು ಮಗು, ತಂದೆ ತಾಯಿಯರನ್ನು ಅಗಲಿದ್ದಾರೆ.

Comments are closed.