Mangaluru: ಮಹಿಳೆಗೆ ಮೆಸೇಜ್ ಮಾಡಿ ‘ಅಡಲ್ಟ್ ವಿಷಯ’ ಮಾತಾಡೋಣ ಎಂದ 20ರ ಪೋರ – ಮಹಿಳೆಯಿಂದ ಬಂತು ಯಾರು ಊಹಿಸದಂತ ರಿಪ್ಲೇ

Share the Article

Mangaluru: 20 ವರ್ಷದ ಹುಡುಗನೊಬ್ಬ ಮಹಿಳೆಯೊಬ್ಬರಿಗೆ ಪರ್ಸನಲ್‌ ಆಗಿ ಮೆಸೇಜ್‌ ಮಾಡಿ ಅಡಲ್ಟ್‌ ವಿಷಯ ಮಾತಾಡೋಣ್ವಾ ಎಂದು ಕೇಳಿದ್ದಾನೆ. ಅಲ್ಲದೆ ಆಗ ಆ ಮಹಿಳೆ ನೀಡಿದ ಉತ್ತರ ಯಾರು ಊಹಿಸಲು ಸಾಧ್ಯವಾಗದ್ದು. ಹಾಗಾದರೆ ಮತ್ತೆ ಏನಾಯ್ತು? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಮ್ಯಾಟರ್.

ಮಂಗಳೂರಿನ ಮಹಿಳೆಗೆ 20 ವರ್ಷದ ಹುಡುಗ ಅಡಲ್ಟ್‌ ವಿಚಾರ ಮಾತನಾಡೋಣ ಎಂದಿದ್ದಾನೆ. ಆಗ ಮಹಿಳೆ ನೀಡಿದ ಉತ್ತರಕ್ಕೆ ಬ್ಲಾಕ್‌ ಮಾಡಿದ್ದಾನೆ. ಈ ಬಗ್ಗೆ ಶಾಂತಿ ರಘುನಾಥ್‌ ಶೆನೋಯ್‌ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದು ನಡೆದ ವಿಚಾರವನ್ನು ವಿವರವಾಗಿ ಹೇಳಿದ್ದಾರೆ.

ಶಾಂತಿ ರಘುನಾಥ್ ಅವರ ಪೋಸ್ಟ್ ನಲ್ಲಿ ಏನಿದೆ?

ನಿನ್ನೆ ನನಗೆ ಒಬ್ಬ ಯುವ, ಆಕರ್ಷಕ ವ್ಯಕ್ತಿಯಿಂದ ಫೇಸ್‌ಬುಕ್ ಫ್ರೆಂಡ್ ರಿಕ್ವೆಸ್ಟ್ ಬಂದಿತು. ಅವನಿಗೆ 20 ವರ್ಷ ಆಗಿತ್ತು. ಇಂತಹ ಯುವಕನಿಗೆ ನಾನು ಯಾಕೆ ಫ್ರೆಂಡ್ ಆಗಬೇಕು ಎಂದು ನನಗೆ ಆಶ್ಚರ್ಯವಾಯ್ತು. ಹಾಗಾಗಿ ನಾನು ಒಪ್ಪಿಕೊಂಡೆ. ಆನಂತರ ಅವನು ಪರ್ಸನಲ್‌ ಆಗಿ ಮೆಸೇಜ್‌ ಮಾಡೋಕೆ ಶುರು ಮಾಡಿದ. ಅವನು ನನ್ನನ್ನು ಸುಂದರಿ ಎಂದು ಕರೆದ. ನನ್ನ ವಯಸ್ಸನ್ನು ಕೇಳಿದ. ನಾನು ಸುಳ್ಳು ಹೇಳುವವಳಲ್ಲ, ಹಾಗಾಗಿ ನನ್ನ ವಯಸ್ಸನ್ನು ಹೇಳಿದೆ, ನಾನು ಅವನಿಗಿಂತ ತುಂಬಾ ಹಿರಿಯ ಎಂದು ನೆನಪಿಸಿದೆ. ಕೆಲವೇ ಸಮಯದಲ್ಲಿ, ಅವನು ‘ಅಡಲ್ಟ್‌ ವಿಷಯಗಳ’ ಬಗ್ಗೆ ಮಾತನಾಡಬಹುದೇ ಎಂದು ಕೇಳಿದನು. ನಾನು ಸರಿ ಎಂದೆ. ಆಗ ಅವನು ‘ಧನ್ಯವಾದ ಬೇಬ್, ನೀನೇ ಶುರು ಮಾಡು’ ಎಂದು ಹೇಳಿದನು.

ಹಾಗಾಗಿ ನಾನು ಶುರು ಮಾಡಿದೆ! ನಾನು ಅವನಿಗೆ ನಿಜವಾದ ಅಡಲ್ಟ್ ವಿಷಯಗಳನ್ನು ಹೇಳಿದೆ. “ನನಗೆ ಪ್ರಿ ಡಯಾಬಿಟಿಕ್‌ ಇದೆ, ನನಗೆ ಸಿಕ್ಕಾಪಟ್ಟೆ ಸಯಾಟಿಕಾ ನೋವಿದೆ. ಮಾಡುತ್ತದೆ. ದೀರ್ಘಕಾಲ ನಿಂತುಕೊಂಡರೆ ನನ್ನ ಬೆನ್ನು ನೋಯುತ್ತದೆ. ನನಗೆ ತೀವ್ರವಾದ ಹೀಟ್ ಲಕ್ಷಣಗಳಿವೆ. ನನ್ನ ಫ್ಲಾಟುಲೆನ್ಸ್ ಮತ್ತು ಒಡೀಮಾ ಇದೆ. ಕೆಲವೊಮ್ಮೆ ನನಗೆ ತೀವ್ರವಾದ ತುರಿಕೆಯಿದ್ದು, ಎಚ್ಚರ ಆಗುವುದು. ಕೆಲವೊಮ್ಮೆ ಬೆಡ್‌ನಿಂದ ಏಳುವಾಗ ನನ್ನ ಬೆನ್ನು ಕಿರಿಕಿರಿ ಶಬ್ದ ಮಾಡುತ್ತದೆ. ರಾತ್ರಿಯಲ್ಲಿ ನನ್ನ ಕಾಲಿನ ನೋವು ಮತ್ತು ರೆಸ್ಟ್‌ಲೆಸ್ ಲೆಗ್ ಸಿಂಡ್ರೋಮ್ ಕೂಡ ಇದೆ. ನೆರೆಹೊರೆಯವರನ್ನು ಎಚ್ಚರಗೊಳಿಸುವಷ್ಟು ಜೋರಾದ ಗೊರಕೆ, ಹುರಿಕೆ ಬರುತ್ತದೆ ಎಂದಲ್ಲ ಹೇಳಿದೆ.

ಸ್ವಲ್ಪ ಹೊತ್ತಿನಲ್ಲಿ ಆದ ನನ್ನನ್ನು ಬ್ಲಾಕ್ ಮಾಡಿದ. ಆದರೆ ಅವನು ಏಕೆ ನನ್ನನ್ನು ಬ್ಲಾಕ್ ಮಾಡಿದನೆಂದು ತಿಳಿಯಲಿಲ್ಲ. ನಾನು ಪ್ರಾಮಾಣಿಕವಾಗಿ ನನ್ನೆಲ್ಲ ಅಡಲ್ಟ್ ವಿಚಾರಗಳನ್ನು ನಾನು ಮಾತನಾಡಿದೆ. ಆದರೆ ಆತ ಬ್ಲಾಕ್ ಯಾಕೆ ಮಾಡಿದ ಎಂದು ತಿಳಿಯುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.

ಇದನ್ನು ನೋಡಿದ ಅನೇಕ ಜನರು ವಿವಿಧ ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ. ಇದು ತುಂಬಾ ಹಾಸ್ಯಸ್ಪದವಾಗಿದೆ, ಇದೇ ರೀತಿ ಮಾಡಬೇಕು, ಸರಿಯಾಗಿ ಬುದ್ಧಿ ಕಲಿಸಿದ್ದೀರಿ ಎಂದಿಲ್ಲ ಕಮೆಂಟಿಸಿದ್ದಾರೆ.

ಇದನ್ನೂ ಓದಿ: Hukkeri Police Station: ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ: ಗೋ ಕಳ್ಳರ ಬಳಿ ಲಂಚ ಪಡೆದ ಆರೋಪ: ಪಿಎಸ್‌ಐ ಅಮಾನತು

Comments are closed.