RCB Stampede: ಕಾಲ್ತುಳಿತ ಪ್ರಕರಣ: ಐಪಿಎಸ್ ವಿಕಾಸ್ ಅಮಾನತು ರದ್ದು ಮಾಡಿದ ಸಿಎಟಿ, ಸರ್ಕಾರಕ್ಕೆ ಮುಖಭಂಗ!

RCB Stampede: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 4 ರಂದು ಆರ್‌ಸಿಬಿ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದು, 64 ಮಂದಿ ಗಾಯಗೊಂಡಿದ್ದರು. ಕಾಲ್ತುಳಿತ ಪ್ರಕರಣದಿಂದ ರಾಜ್ಯ ಸರಕಾರ ಮಾಜಿ ಕಮಿಷನರ್ ದಯಾನಂದ ಮತ್ತು ಇಬ್ಬರು ಡಿಸಿಇಗಳು ಸೇರಿ ಆರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿತ್ತು.
ತಮ್ಮ ಅಮಾನತು ಆದೇಶವನ್ನು ಪ್ರಶ್ನೆ ಮಾಡಿದ ವಿಕಾಸ್ ಕುಮಾರ್ ಅವರು ಕೋರ್ಟ್ ಮೊರೆ ಹೋಗಿದ್ದರು. ಇದೀಗ ಕೇಂದ್ರ ಆಡಳಿತಾತ್ಮಕ ನಾಯ್ಯಮಂಡಳಿ (ಸಿಎಟಿ)ವಿಕಾಸ್ ಕುಮಾರ್ ಅಮಾನತು ರದ್ದುಪಡಿಸಿ ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯಸರಕಾರಕ್ಕೆ ಭಾರೀ ಮುಖಭಂಗವಾಗಿದೆ ಎನ್ನಬಹುದು.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಉಪಪೊಲೀಸ್ ಆಯುಕ್ತ (ಕೇಂದ್ರ) ಶೇಖರ್ ಎಚ್.ತೆಕ್ಕಣ್ಣವರ್, ಕಬ್ಬನ್ ಪಾರ್ಕ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸಿ.ಬಾಲಕೃಷ್ಣ ಮತ್ತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎ.ಕೆ.ಗಿರೀಶ್ ಅವರನ್ನು ಸರಕಾರ ಅಮಾನತು ಮಾಡಿತ್ತು.
ಸಿಎಟಿ ಆದೇಶವನ್ನು ಕಾಂಗ್ರೆಸ್ ಸರಕಾರ ಹೈಕೋರ್ಟಿನಲ್ಲಿ ಪ್ರಶ್ನೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಇದನ್ನೂ ಓದಿ: Bindu Jeera: ಉತ್ತರ ಭಾರತದಲ್ಲೂ ಇನ್ನು ಸಿಗಲಿದೆ ಕರ್ನಾಟಕದ ಬಿಂದು ಜೀರಾ
Comments are closed.