Kodi Shri: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಇವರೇ..! ಕೋಡಿ ಶ್ರೀಗಳಿಂದ ಅಚ್ಚರಿ ಭವಿಷ್ಯ

Kodi Shri: ರಾಜಕೀಯ ವಿಚಾರ, ನೈಸರ್ಗಿಕ ವಿಚಾರ ಹಾಗೂ ಸಾವು ನೋವು, ಮಳೆ ಮತ್ತು ಪ್ರಕೃತಿ ವಿಕೋಪಗಳ ಆದಿಯಾಗಿ ಅನೇಕ ಸಂಗತಿಗಳ ಕುರಿತು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿಯುತ್ತಾರೆ. ಅವರ ಎಲ್ಲ ಭವಿಷ್ಯಗಳು ಕೂಡ ನಿಜವಾಗಿವೆ. ಅದರಲ್ಲೂ ರಾಜಕೀಯವಾಗಿ ಅವರು ನೀಡುವ ಅಚ್ಚರಿ ಭವಿಷ್ಯಗಳು ಸತ್ಯವಾಗಿದೆ. ಇದೀಗ ಶ್ರೀಗಳು ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದರ ಕುರಿತು ಭವಿಷ್ಯ ನುಡಿದ್ದಾರೆ.
ಹೌದು, ಈಗಾಗಲೇ ಸಿಎಂ ರೇಸ್‌ನಲ್ಲಿ ಡಿಕೆ ಶಿವಕುಮಾರ್, ಜಿ.ಪರಮೇಶ್ವರ್, ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರಿದ್ದು, ಈ ಪೈಕಿ ಇವರಿಗೆ ಮುಖ್ಯಮಂತ್ರಿ ಪಟ್ಟ ಎಂದು ಕೋಡಿಶ್ರೀ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕಡನಿ ಗ್ರಾಮದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಂದರ್ಭದಲ್ಲಿ ಈ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದರು. ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬೆನ್ನಲ್ಲೇ ಈ ಹೇಳಿಕೆ ವೈರಲ್ ಆಗಿದೆ.
“ಎಂಬಿ ಪಾಟೀಲ್ ಅವರು ತುಂಬಾ ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಮುಖ್ಯಮಂತ್ರಿ ಆಗುವ ಯೋಗ ಇದೆ. ಉತ್ತರ ಕರ್ನಾಟಕ ಭಾಗದಿಂದ ಎಂ.ಬಿ.ಪಾಟೀಲ್ ಅವರು ಮುಖ್ಯಮಂತ್ರಿಯಾಗಲಿ” ಎಂದು ಹೇಳಿದ್ದಾರೆ.
Comments are closed.