RSS: ನಾವು ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ RSS ಬ್ಯಾನ್‌: ಸಚಿವ ಪ್ರಿಯಾಂಕ್‌ ಖರ್ಗೆ

Share the Article

RSS: ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ನಾವು ಈ ಹಿಂದೆ ಆರ್‌ಎಸ್‌ಎಸ್‌ನ್ನು ಎರಡು ಬಾರಿ ಬ್ಯಾನ್‌ ಮಾಡಿದ್ದೆವು. ನಮ್ಮ ಕೈಕಾಲು ಹಿಡಿದು ಬ್ಯಾನ್‌ ವಾಪಸ್‌ ಮಾಡಿ ಬಂದಿದ್ದರು. ಆಗ ಬ್ಯಾನ್‌ ಮಾಡಿದ್ದೇ ತಪ್ಪಾಯ್ತು. ಮುಂದೆ ನಮ್ಮ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಆರ್‌ಎಸ್‌ಎಸ್‌ ಬ್ಯಾನ್‌ ಮಾಡುವ ತೀರ್ಮಾನ ಮಾಡುತ್ತೇವೆ ಎಂದು ತಂತ್ರಜ್ಞಾನ ಹಾಗೂ ಮಾಹಿತಿ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಸಂವಿಧಾನದಿಂದ ಜಾತ್ಯಾತೀತ ಮತ್ತು ಸಮಾಜವಾದಿ ಪದ ತೆಗೆಯಬೇಕು ಎಂದು ಆರ್‌ಎಸ್‌ಎಸ್‌ ಮುಖಂಡ ಹೊಸಬಾಳೆ ಅವರು ಆಗ್ರಹ ಮಾಡಿದ ವಿಚಾರದ ಕುರಿತು ಹೇಳುತ್ತಾ, ಹೊಸಬಾಳೆ ಅವರು ಯಾವ ಸ್ಕೂಲ್‌ ಆಫ್‌ ಥಾಟ್‌ ಇಂದ ಬರ್ತಾರೆ. ಆರ್‌ಎಸ್‌ಎಸ್ ‌ಹಿನ್ನಲೆಯಿಂದ ಬರುತ್ತಾರೆ. ಅವರಿಗೆ ಇದರದೆಲ್ಲ ಅಲರ್ಜಿ ಇದೆ. ಆರ್‌ಎಸ್‌ಎಸ್‌ ಸಿದ್ಧಾಂತರವನ್ನು ನಾವು ಮೊದಲಿನಿಂದಲೂ ವಿರೋಧ ಮಾಡ್ತಾ ಇದ್ದೇವೆ. ಈಗಲೂ ಮಾಡ್ತೀವಿ ಎಂದು ಹೇಳಿದರು.

ಡಾ.ಬಿ.ಆರ್‌ ಅಂಬೇಡ್ಕರ್‌ ಅವರ ವಿರೋಧಿಗಳು ಆರ್‌ಎಸ್‌ಎಸ್‌ ಸಂಘಟನೆಯವರು. ಬಿಜೆಪಿಯರಿಗೆ ನಾನು ಈ ಕುರಿತು ದಾಖಲೆಯನ್ನೂ ಕೊಟ್ಟೆ. ರಾಜೀನಾಮೆ ನೀಡಲಿಲ್ಲ. ನಾಯಿ ತರಹ ಬೊಗಳುತ್ತಾರೆ ಅಂತ ವಿಷಯ ಡೈವರ್ಟ್‌ ಮಾಡುತ್ತಾರೆ. ಸಂವಿಧಾನ ಓದಿಕೊಳ್ಳಲಿ ಮೊದಲು ಇವರು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಕಿಡಿಕಾರಿದರು

Comments are closed.