Lucknow: ದೇವಸ್ಥಾನದ ಆವರಣದಲ್ಲಿ ನಮಾಜ್ ಮಾಡಿದ ವ್ಯಕ್ತಿ; ವಿಡಿಯೋ ವೈರಲ್, ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

Lucknow: ಸಾಮಾಜಿಕ ಜಾಲತಾಣದಲ್ಲಿ ಯುವಕನೊಬ್ಬ ದೇವಸ್ಥಾನದ ಆವರಣದಲ್ಲಿ ನಮಾಜ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ವೈರಲ್ ಬೆನ್ನಲ್ಲೇ ಅಲ್ಲಿನ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಜನರು ಶಾಂತಿ ಕಾಪಾಡಬೇಕು ಎಂದು ಪೊಲೀಸರು ಈಗಾಗಲೇ ಮನವಿ ಮಾಡಿದ್ದು, ಮುಂಜಾಗ್ರತ ಕ್ರಮವಾಗಿ ಗ್ರಾಮದಲ್ಲಿ ನಿಯೋಜನೆ ಮಾಡಲಾಗಿದೆ.

यूपी के बदायूं में मुस्लिम युवक ने मंदिर परिसर में पढ़ी नमाज, वीडियो वायरल होने पर मुकदमा दर्ज फिर गिरफ्तार !!
उत्तर प्रदेश के बदायूं में एक मुस्लिम व्यक्ति द्वारा मंदिर परिसर में नमाज अदा करने का मामला सामने आया है, जिससे हिंदू समुदाय में आक्रोश फैल गया। वायरल वीडियो के आधार पर… pic.twitter.com/SQvbcdLyuz
— MANOJ SHARMA LUCKNOW UP (@ManojSh28986262) June 29, 2025
ವಿಡಿಯೋ ವೈರಲ್ ಆದ ಬೆನ್ನಲ್ಲೇ ದೇವಸ್ಥಾನದ ಆವರಣದಲ್ಲಿ ನಮಾಜ್ ಮಾಡಿರುವ ಯುವಕನನ್ನು ಬಂಧನ ಮಾಡಲಾಗಿದೆ. ಅಲಿ ಹಸನ್ ಮೊಹಮ್ಮದ್ ಬಂಧಿತ ಆರೋಪಿ. ದತಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಪಾಪಡ್ ಗ್ರಾಮದಲ್ಲಿರುವ ಬ್ರಹ್ಮದೇವ್ ದೇವಸ್ಥಾನದ ಆವರಣದಲ್ಲಿ ಈ ಘಟನೆ ನಡೆದಿದೆ. ವಿಡಿಯೋ ವೈರಲ್ ಬೆನ್ನಲ್ಲೇ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದೆ. ದೇವಸ್ಥಾನದ ಆವರಣದಲ್ಲಿ ನಮಾಜ್ ಮಾಡಿರುವ ಯುವಕನನ್ನು ಬಂಧನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಸನ್ ಅಲಿ ಮೊಹಮ್ಮದ್ ಸುಮಾರು 25-30 ವರ್ಷಗಳಿಂದ ದೇವಾಲಯದ ಆವರಣದಲ್ಲಿ ವಾಸ ಮಾಡುತ್ತಿದ್ದು, ದೇವಾಲಯ ಮತ್ತು ಗೋಸೇವೆಯನ್ನು ಸ್ವಚ್ಛಗೊಳಿಸುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ.
Comments are closed.