Price: ಜನಸಾಮಾನ್ಯರಿಗೆ ನೆಮ್ಮದಿಯ ಸುದ್ದಿ – ಅಕ್ಕಿ, ಬೇಳೆ ಕಾಳು ದರದಲ್ಲಿ ಭಾರೀ ಇಳಿಕೆ

Share the Article

Price : ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನಸಾಮಾನ್ಯರಿಗೆ ನೆಮ್ಮದಿಯ ಸುದ್ದಿಯೊಂದು ಸಿಕ್ಕಿದ್ದು, ಮಾರುಕಟ್ಟೆಯಲ್ಲಿ ಅಕ್ಕಿ ಮತ್ತು ಬೇಳೆ ಕಾಳುಗಳ ದರ ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಹೌದು, ಕಳೆದ ವರ್ಷದ ಉತ್ತಮ ಮುಂಗಾರು ಹಾಗೂ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳು ಈಗ ಫಲ ನೀಡಲು ಆರಂಭಿಸಿವೆ. ತೊಗರಿಬೇಳೆ, ಉದ್ದಿನಬೇಳೆ ಜತೆ ಇತರ ಬೇಳೆಕಾಳುಗಳು ಹಾಗೂ ಸ್ಟೀಮ್ ರೈಸ್ ದರ ಗಣನೀಯವಾಗಿ ಇಳಿಕೆಯಾಗಿದೆ.

ಅಂದಹಾಗೆ ಕಳೆದ ವರ್ಷದ ಉತ್ತಮ ಮುಂಗಾರು ಹಾಗೂ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳು ಈಗ ಫಲ ನೀಡಲು ಆರಂಭಿಸಿವೆ. ಚಿಲ್ಲರೆ ವರ್ತಕರು ಕೂಡ ಬೆಲೆ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಮುಂದಾಗಿದ್ದಾರೆ.

ಕಳೆದ ವರ್ಷ ಭತ್ತ, ಬೇಳೆಕಾಳು ಉತ್ಪಾದನೆ ಶೇಕಡ  20ರಷ್ಟು ಹೆಚ್ಚಳವಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಅಕ್ಕಿ, ಬೇಳೆ ಕಾಳು ದರ ಶೇಕಡ 15 ರಿಂದ 20ರಷ್ಟು ಕಡಿಮೆಯಾಗಿದೆ. ಏಪ್ರಿಲ್ ನಲ್ಲಿ 180 ರಿಂದ 200 ರೂಪಾಯಿ ಇದ್ದ ತೊಗರಿ ಬೆಳೆ ದರ 130 ರಿಂದ 150 ರೂಪಾಯಿಗೆ ಇಳಿಕೆಯಾಗಿದೆ.

62 ರಿಂದ 65 ರೂ.ವರೆಗೆ ಗ್ರೇಡ್ -1 ಸ್ಟೀಮ್ ಅಕ್ಕಿದರ 55 ರಿಂದ 60 ರೂ.ಗೆ ಕಡಿಮೆಯಾಗಿದೆ. 55 ರಿಂದ 57 ರೂ. ಇದ್ದ ಗ್ರೇಡ್ -2 ಸ್ಟೀಮ್ ಅಕ್ಕಿ ದರ 50 ರೂ.ಗೆ ಇಳಿಕೆಯಾಗಿದೆ. 48 ರಿಂದ 50 ರೂ. ಇದ್ದ ಗ್ರೇಡ್ -3 ಸ್ಟೀಮ್ ಅಕ್ಕಿ ದರ 42- 45 ರೂ.ಗೆ ಇಳಿಕೆಯಾಗಿದೆ.

ಇದನ್ನೂ ಓದಿ: Ramesh Jarkiholi : ರಮೇಶ್ ಜಾರಕಿಹೊಳಿ ಮತ್ತೆ ಕಾಂಗ್ರೆಸ್ ಸೇರ್ಪಡೆ? – ಕುತೂಹಲ ಕೆರಳಿಸಿದ ಅಣ್ಣ- ತಮ್ಮಂದಿರ ಭೇಟಿ!!

Comments are closed.