Bigg Boss Kannada: ‘ಬಿಗ್ಬಾಸ್ ಕನ್ನಡ ಸೀಸನ್ 12’ ಈ ಬಾರಿಯ ನಿರೂಪಕರಾಗಿ ಕಿಚ್ಚ ಸುದೀಪ್

Bigg Boss Kannada 12: ಕಿರುತೆರೆ ಲೋಕದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡದ 11 ಸೀಸನ್ಗಳು ಈಗಾಗಲೇ ಮುಕ್ತಾಯಗೊಂಡಿದ್ದು, ಸೀಸನ್ 12 ರ ನಿರೂಪಕರಾಗಿ ಸುದೀಪ್ ಅವರೇ ಮಾಡಬೇಕು ಎನ್ನುವ ಅಭಿಮಾನಿಗಳ ಆಸೆ ಕೊನೆಗೂ ಈಡೇರಿದೆ. ಈ ಬಾರಿಯ ಸೀಸನ್ ಗೆ ಕೂಡಾ ನಿರೂಪಕರಾಗಿ ಸುದೀಪ್ ಮುಂದುವರಿಯಲಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಕಲರ್ಸ್ ಕನ್ನಡ ವಾಹಿನಿಯ ಸುದ್ದಿಗೋಷ್ಠಿಯಲ್ಲಿ ಈ ಬಿಗ್ ಅಪ್ಡೇಟ್ ದೊರಕಿದೆ. ಸ್ವತಃ ಸುದೀಪ್ ಅವರೇ ಇದನ್ನು ಕನ್ಫರ್ಮ್ ಮಾಡಿದ್ದಾರೆ. ಬಿಗ್ಬಾಸ್ ಸೀಸನ್ 11 ಪ್ರಾರಂಭವಾದಾಗ ಸುದೀಪ್ ಅವರು ನಾನು ಮುಂದಿನ ಬಾರಿ ನಿರೂಪಣೆ ಮಾಡುವುದಿಲ್ಲ ಎನ್ನುವುದನ್ನು ಟ್ವೀಟ್ ಮಾಡಿದ್ದು, ಹಾಗಾಗಿ ಅಭಿಮಾನಿಗಳು ಸುದೀಪ್ ಅವರೇ ಈ ಶೋನ ಮುಂದುವರಿಯ ಬೇಕು ಎನ್ನುವ ಒತ್ತಾಯ ಹೆಚ್ಚಾಗಿತ್ತು.
Comments are closed.