Woman Missing: ಇಂಗ್ಲಿಷ್‌ ಬರಲ್ಲ, ಸಂಬಂಧಿಕರಿಲ್ಲ, ಮದುವೆ ಆಗಿ ಅಮೆರಿಕಕ್ಕೆ ಹೋದ ಮಹಿಳೆ ಮಿಸ್ಸಿಂಗ್‌

Share the Article

Missing Case: ಅರೇಂಜ್ಡ್‌ ಮ್ಯಾರೇಜ್‌ ಆಗಿ ಅಮೆರಿಕಕ್ಕೆ ಹೋದ ಮಹಿಳೆ ಏಕಾಏಕಿ ನಾಪತ್ತೆಯಾಗಿರುವ ಘಟನೆ ನಡೆದಿದೆ. 24 ವರ್ಷದ ಭಾರತೀಯ ಮಹಿಳೆ ಸಿಮ್ರನ್‌ ಜೂ.20 ರಂದು ಭಾರತದಿಂದ ನ್ಯೂಜೆರ್ಸಿಗೆ ಹೋಗಿದ್ದು, ನಂತರ ನಾಪತ್ತೆಯಾಗಿದ್ದಾರೆ.

ಅಮೆರಿಕಕ್ಕೆ ಹೋದ ಐದು ದಿನಗಳ ನಂತರ ಸಿಮ್ರನ್‌ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಅಮೆರಿಕಕ್ಕೆ ಉಚಿತ ವಿಮಾನ ಟಿಕೆಟ್‌ ಪಡೆಯಲು ಮದುವೆ ಒಂದು ನೆಪವಾಗಿರಬಹುದೇ ಎನ್ನುವ ಸಾಧ್ಯತೆಯನ್ನು ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.

ಅಮೆರಿಕದಲ್ಲಿ ಸಿಮ್ರನ್‌ಗೆ ಯಾವುದೇ ಸಂಬಂಧಿಕರಿಲ್ಲ. ಇಂಗ್ಲೀಷ್‌ ಬರುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಮ್ರನ್ ಐದು ಅಡಿ, ನಾಲ್ಕು ಇಂಚು ಎತ್ತರವಾಗಿದ್ದು, ಸುಮಾರು 68 ಕೆಜಿ ತೂಕ ಇದ್ದಾರೆ. ಅವರ ಹಣೆಯ ಎಡ ಭಾಗದಲ್ಲಿ ಸಣ್ಣ ಗಾಯದ ಗುರುತಿದೆ. ಕೊನೆಯ ಬಾರಿಗೆ ಬೂದು ಬಣ್ಣದ ಸ್ವೆಟ್​​ಪ್ಯಾಂಟ್ ಹಾಗೂ ಬಿಳಿ ಟಿ ಶರ್ಟ್​ ಧರಿಸಿದ್ದರು. ಆಕೆಯ ಇರುವಿಕೆಯ ಬಗ್ಗೆ ಮಾಹಿತಿ ಇರುವ ಯಾರಾದರೂ ಲಿಂಡೆನ್‌ವೋಲ್ಡ್ ಪೊಲೀಸ್ ಡಿಟೆಕ್ಟಿವ್ ಜೋ ಟೊಮಸೆಟ್ಟಿರನ್ನು ಸಂಪರ್ಕಿಸಲು ತಿಳಿಸಲಾಗಿದೆ.

Comments are closed.