Mangalore: ಮಂಗಳೂರು: ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಬೀಚ್‌ಗೆ ಕರೆದೊಯ್ದು ಕಾರಿನಲ್ಲಿ ರೇಪ್‌; ಕೇಸು ದಾಖಲು

Share the Article

ಮಂಗಳೂರು: ಉಳ್ಳಾಲದ ಸೋಮೇಶ್ವರ ಬೀಚ್‌ಗೆ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಈ ಕುರಿತು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಯುವತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಸಿಕೊಂಡ ಯುವಕ ಐದು ದಿನದಲ್ಲಿ ಆಕೆಯನ್ನು ಪುಸಲಾಯಿಸಿ ಬೀಚ್‌ಗೆ ಕರೆದುಕೊಂಡು ಹೋಗಿ, ಕಾರಿನಲ್ಲಿಯೇ ಅತ್ಯಾಚಾರ ಮಾಡಿದ್ದಾನೆ.

ಅಡ್ಯಾರ್‌ ವಳಚ್ಚಿಲ್‌ ನಿವಾಸಿ ಪೇಟಿಂಗ್‌ ವೃತ್ತಿ ಮಾಡಿಕೊಂಡಿರುವ ಕೆಲ್ವಿನ್‌ (24) ಎಂಬುವವನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಪಿಯುಸಿ ಮುಗಿಸಿ ನರ್ಸಿಂಗ್‌ ಶಿಕ್ಷಣ ಓದಲು ತಯಾರಿ ಮಾಡಿಕೊಂಡಿರುವ ಸಂತ್ರಸ್ತ ಯುವತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡು ಆರೋಪಿ ಐದು ದಿನದಲ್ಲೇ ಭೇಟಿಯಾಗಲು ಉಳ್ಳಾಲದ ಮನೆಗೆ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ.

ಅನಂತರ ಕುತ್ತಾರು ಸಮೀಪದ ಲಾಡ್ಜ್‌ಗೆ ಕರೆದುಕೊಂಡು ಹೋಗಿ ರೂಂ ಕೇಳಿದ್ದಾನೆ. ಯುವತಿ ಅಪ್ರಾಪ್ತೆಯಾಗಿರುವ ಕಾರಣ ಲಾಡ್ಜ್‌ ಸಿಬ್ಬಂದಿ ರೂಂ ನೀಡಿರಲಿಲ್ಲ. ನಂತರ ಸೋಮೇಶ್ವರ ಕಡಲ ತೀರಕ್ಕೆ ಕರೆದುಕೊಂಡು ಹೋಗಿ ಕಾರಿನಲ್ಲಿ ಅತ್ಯಾಚಾರ ಮಾಡಿದ್ದಾನೆ. ನಂತರ ಆಕೆಯನ್ನು ಮನೆಯವರೆಗೂ ಕಾರಿನಲ್ಲಿ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದಾನೆ. ರಾತ್ರಿ ಬಾಲಕಿಗೆ ಹೊಟ್ಟೆ ನೋವು ಕಾಣಿಸಿದೆ. ವೈದ್ಯರ ಬಳಿ ತೋರಿಸಿದಾಗ ಅತ್ಯಾಚಾರ ನಡೆದಿರುವುದು ಕಂಡು ಬಂದಿದೆ.

ಇದನ್ನೂ ಓದಿ:Bengaluru : ಜಾಸ್ತಿ ಹಣ ಪೀಕೋ ಆಟೋ ಚಾಲಕರೇ ಎಚ್ಚರ!! ನಿಮ್ಮ ನಟ್ಟು- ಬೋಲ್ಟು ಸರಿ ಮಾಡಲು ಸಾರಿಗೆ ಸಚಿವರು ಸಾರಿದ್ದಾರೆ ಸಮರ

Comments are closed.