Indian Railway: ಚಿಕ್ಕಮಗಳೂರು ತಿರುಪತಿ ನಡುವೆ ವಾರಕ್ಕೊಮ್ಮೆ ರೈಲು ಸಂಚಾರ: ವೇಳಾಪಟ್ಟಿ ಇಂತಿವೆ

Share the Article

Indian Railway: ತಿರುಪತಿ ಮತ್ತು ಚಿಕ್ಕಮಗಳೂರು ನಡುವೆ ಹೊಸ ನೇರ ರೈಲು ಸಂಚಾರಕ್ಕೆ (Indian Railway) ರೈಲ್ವೆ ಮಂಡಳಿಯು ಅನುಮೋದನೆ ನೀಡಿದೆ. ಈ ರೈಲು ಆರಂಭದಲ್ಲಿ ವಾರಕ್ಕೊಮ್ಮೆ ಸಂಚರಿಸಲಿದ್ದು, ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ತಿರುಪತಿಯಿಂದ ಗುರುವಾರ ರಾತ್ರಿ 9 ಗಂಟೆಗೆ ಹೊರಡುವ ರೈಲು (ಗಾಡಿ ಸಂಖ್ಯೆ: 17423) ಶುಕ್ರವಾರ ಬೆಳಗ್ಗೆ10:30 ಚಿಕ್ಕಮಗಳೂರಿಗೆ ಆಗಮಿಸಲಿದೆ. ಇದೇ ರೀತಿ, ಶುಕ್ರವಾರ ಸಂಜೆ 5:30ಕ್ಕೆ ಚಿಕ್ಕಮಗಳೂರಿನಿಂದ ಹೊರಡುವ ರೈಲು (ಗಾಡಿ ಸಂಖ್ಯೆ: 17424) ಶನಿವಾರ ಬೆಳಿಗ್ಗೆ 7:40ಕ್ಕೆ ತಿರುಪತಿಗೆ ತಲುಪಲಿದೆ.

ಈ ರೈಲು ಸಖರಾಯಪಟ್ಟಣ, ಬಿಸ್ಸೇಹಳ್ಳಿ, ಕಡೂರು, ಬೀರೂರು, ದೇವನೂರು, ಅರಸೀಕೆರೆ, ತಿಪಟೂರು, ತುಮಕೂರು. ಚಿಕ್ಕಬಾಣಾವರ, ಸರ್ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣ (ಬೆಂಗಳೂರು), ಕೆ.ಆ‌ರ್.ಪುರ, ವೈಟ್‌ಫೀಲ್ಡ್‌, ಬಂಗಾರಪೇಟೆ, ಕುಪ್ಪಂ, ಜೋಲಾರಪೇಟೆ, ಕಟ್ಟಾಡಿ, ಚಿತ್ತೂರು ಮತ್ತು ಪಾಕಲ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿದೆ.

ರೈಲು ಸಂಚಾರದ ಆರಂಭಿಕ ದಿನಾಂಕವನ್ನು ಶೀಘ್ರವೇ ಘೋಷಿಸಲಾಗುವುದು ಎಂದು ರೈಲ್ವೆ ಮಂಡಳಿ ತಿಳಿಸಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ರೈಲ್ವೆ ಸಚಿವರೊಂದಿಗೆ ಚರ್ಚಿಸಿ ಈ ಯೋಜನೆಗೆ ಚಾಲನೆ ನೀಡಿದ್ದು, ಶುಕ್ರವಾರ ವೇಳಾಪಟ್ಟಿ ಬಿಡುಗಡೆಯಾಗಿದೆ.

ಇದನ್ನೂ ಓದಿ: Belthangady: ಎಸ್‌.ಡಿ.ಎಂ ಪದವಿ ಪೂರ್ವ ಕಾಲೇಜಿನ ಹರ್ಷಿತ್ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆ!

Comments are closed.