Sullia: ಬೈಕ್ ಮೇಲೆ ವಿದ್ಯುತ್ ತಂತಿ ಬಿದ್ದು, ಸವಾರನಿಗೆ ಗಾಯ

Sullia: ಸುಳ್ಯ-ಬೆಳ್ಳಾರೆ ರಸ್ತೆಯ ಐವರ್ನಾಡು ಬಳಿ ವಿದ್ಯುತ್ ತಂತಿ ತುಂಡಾಗಿ ಬೈಕ್ ಮೇಲೆ ಬಿದ್ದ ಪರಿಣಾಮ ಸವಾರ ರಸ್ತೆಗೆ ಬಿದ್ದು ಗಾಯಗೊಂಡ ಘಟನೆ ನಡೆದಿದೆ.

ಪೆರಾಜೆ ಅಂಚೆ ಕಚೇರಿಯಲ್ಲಿ ಅಂಚೆಪಾಲಕರಾಗಿರುವ ಸುಮಂತ್ ಅವರು ಬೆಳಗ್ಗೆ ಬೆಳ್ಳಾರೆಯಿಂದ ಪೆರಾಜೆಗೆ ಬರುತ್ತಿರುವಾಗ ಐವರ್ನಾಡು ಬಳಿ ವಿದ್ಯುತ್ ತಂತಿ ತುಂಡಾಗಿ ಬೈಕ್‌ನ ಮೇಲೆ ಬಿದ್ದಿದೆ. ವಿದ್ಯುತ್ ತಂತಿ ಬೈಕ್‌ನ ಕನ್ನಡಿಗೆ ಸಿಲುಕಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ.
ಸುಮಂತ್ ಅವರ ಮೊಣಕಾಲಿಗೆ ಪೆಟ್ಟು ಬಿದ್ದಿದೆ. ಇವರನ್ನು ಸುಳ್ಯ ಸರಕಾರ ಆಸ್ಪತ್ರೆಗೆ ದಾಖಲು ಮಾಡಿ, ಪುತ್ತೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Comments are closed.