Murder: ಮಂಜೇಶ್ವರ: ಮಲಗಿದ್ದ ತಾಯಿಗೆ ಬೆಂಕಿ ಹಚ್ಚಿ ಕೊಂದ ಮಗ, ನೆರೆಮನೆಯ ಮಹಿಳೆಗೂ ಬೆಂಕಿ, ಗಂಭೀರ

Share the Article

Murder: ರಾತ್ರಿ ಹೊತ್ತು ಮನೆಯಲ್ಲಿ ಮಲಗಿದ್ದ ತಾಯಿಗೆ ಬೆಂಕಿ ಹಚ್ಚಿ ಆಕೆಯನ್ನು ಕೊಂದು ನಂತರ ನೆರೆಮನೆಯ ಮಹಿಳೆಯನ್ನು ಮನೆಗೆ ಕರೆಸಿ, ಆಕೆಗೂ ಬೆಂಕಿ ಹಚ್ಚಿದ ಘಟನೆ ಮಂಜೇಶ್ವರದಲ್ಲಿ ನಡೆದಿದೆ.

ಈ ಘಟನೆಯಲ್ಲಿ ತಾಯಿ ಸಾವಿಗೀಡಾಗಿದ್ದು, ನೆರೆಮನೆಯ ಮಹಿಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ವರ್ಕಾಂಡಿ ನಲ್ಲಂಗಿ ನಿವಾಸಿ ದಿ.ಲೂಯಿಸ್‌ ಮೊಂತೇರೋ ಅವರ ಪತ್ನಿ ಹಿಲ್ಡಾ (60) ಮೃತ ಪಟ್ಟ ಮಹಿಳೆ. ಪುತ್ರ ಮೆಲ್ವಿನ್‌ ಮೊಂತೇರೋ ಕೃತ್ಯವೆಸಗಿದ ಆರೋಪಿ.

ನೆರೆಮನೆಯ ವಿಕ್ಟರ್‌ ಅವರ ಪತ್ನಿ ಲೊಲಿಟಾ (30) ಗಂಭೀರವಾಗಿ ಗಾಯಗೊಂಡ ಮಹಿಳೆ. ಜೂನ್‌ 26 ರ ಮುಂಜಾನೆ ಈ ಘಟನೆ ನಡೆದಿದೆ. ಆರೋಪಿ ಮೆಲ್ವಿನ್‌ ಮೊಂತೇರೋ (33) ಪರಾರಿಯಾಗಿದ್ದಾನೆ. ತಾಯಿಗೆ ಬೆಂಕಿ ಹಚ್ಚಿದ ನಂತರ ಆರೋಪಿ ನೆರೆಮನೆಯ ಮಹಿಳೆಯನ್ನು ತಾಯಿಗೆ ಹುಷಾರಿಲ್ಲವೆಂದು ಮನೆಗೆ ಕರೆದಿದ್ದು, ಆಕೆಗೆ ಬೆಂಕಿ ಹಚ್ಚಿದ್ದಾನೆ. ತಾಯಿ ಮೃತದೇಹ ಮನೆಯ ಹಿಂಭಾಗದ ಪೊದರೆಗಳಲ್ಲಿ ದೊರಕಿದೆ.

ಮನೆಯಲ್ಲಿ ತಾಯಿ ಮತ್ತು ಮಗ ಇಬ್ಬರೇ ವಾಸ ಮಾಡುತ್ತಿದ್ದು, ಇನ್ನೋರ್ವ ಮಗ ಅಲ್ವಿನ್‌ ಮೊಂತೇರೋ ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದಾನೆ. ಆರೋಪಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಕೊಲೆ ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ.

ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:Conversion: ಫೈಜಲ್, ರಾಹುಲ್‌ ಆಗಿ ನಟನೆ – ಮಹಿಳೆಯನ್ನು ಲೈಂಗಿಕವಾಗಿ ಶೋಷಿಸಿ ಮತಾಂತರಕ್ಕೆ ಒತ್ತಾಯ

Comments are closed.