Kannada language: ರಾಜ್ಯದ ಸರ್ಕಾರಿ ಇಲಾಖೆಗಳಲ್ಲಿ ಕನ್ನಡ ಕಡ್ಡಾಯ: ತಪ್ಪಿದಲ್ಲಿ ಕಠಿಣ ಕ್ರಮ

Kannada language: ರಾಜ್ಯದ ಅಂಗಡಿ ಮುಂಗಟ್ಟುಗಳ ನಾಮಫಲಕದಲ್ಲಿ 60% ಕನ್ನಡ ಕಡ್ಡಾಯ ಎಂಬ ಆದೇಶ ಈಗಾಗಲೇ ಚಾಲ್ತಿಯಲ್ಲಿದೆ. ಆದ್ರೆ ಇದು ಸಮರ್ಪಕವಾಗಿ ಇನ್ನೂ ಜಾರಿಯಾಗಿಲ್ಲ. ಹೀಗಿರುವಾಗಲೇ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಇಲಾಖೆಗಳಲ್ಲಿಯೂ ಕನ್ನಡ ಕಡ್ಡಾಯ (Kannada language) ಎಂಬ ಸುತ್ತೋಲೆ ಹೊರಡಿಸಿದೆ.

ಈ ನಿಯಮವನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ಸರ್ಕಾರ ನೀಡಿದೆ. ಈ ನಿಯಮಾನುಸಾರ ಕನ್ನಡದಲ್ಲಿ ಬರುವ ಪತ್ರಗಳಿಗೆ ಕನ್ನಡದಲ್ಲೇ ಉತ್ತರ ನೀಡುವಂತೆ ಸೂಚಿಸಲಾಗಿದೆ. ಕನ್ನಡದಲ್ಲೇ ಕಚೇರಿಯ ನಾಮಪತ್ರಗಳು ನಮೂದಾಗಬೇಕು. ಸರ್ಕಾರದ ಎಲ್ಲಾ ಇಲಾಖೆಗಳ ಸುತ್ತೇಲೆಯನ್ನು ಕನ್ನಡದಲ್ಲೇ ಹೊರಡಿಸಬೇಕಿದೆ. ಆದೇಶ ಪ್ರತಿಗಳೂ ಸಹ ಕನ್ನಡದಲ್ಲೇ ಇರಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ: Kodagu Rain: ಕೊಡಗಿನಲ್ಲಿ ಬಾರಿ ಮಳೆ : ತುಂಬಿ ಹರಿಯುತ್ತಿರುವ ಕಾವೇರಿ – ಜನ ಜೀವನ ಅಸ್ತವ್ಯಸ್ತ
Comments are closed.