Suicide: ಪೋಷಕರನ್ನು ವೃದ್ಧಾಶ್ರಮ ಸೇರಿಸಿದ ಮಗ: ದಂಪತಿ ಆತ್ಮಹತ್ಯೆ

Share the Article

Suicide: ತನ್ನನ್ನು ಹೆತ್ತು ಹೊತ್ತು ಸಾಕಿದ ಪೋಷಕರನ್ನು ಮಗನೋರ್ವ ಅವರ ವೃದ್ಧಾಪ್ಯದಲ್ಲಿ ನೋಡಿಕೊಳ್ಳಲು ಆಗದೆ ವೃದ್ಧಾಶ್ರಮಕ್ಕೆ ಸೇರಿಸಿದ್ದು, ಇದರಿಂದ ಮನನೊಂದ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಜೆ.ಪಿ.ನಗರದ 8 ನೇ ಹಂತದಲ್ಲಿ ನಡೆದಿದೆ.

ಕೃಷ್ಣಮೂರ್ತಿ (81), ರಾಧಾ (74) ಮೃತ ದಂಪತಿಗಳು.

ಸೊಸೆ ಮಾಡಿದ ಅಡುಗೆ ಇಷ್ಟವಿಲ್ಲ, ಹೊಂದಾಣಿಕೆಯಾಗದ ಕಾರಣ ಬೇರೆ ಮನೆ ಮಾಡಿಕೊಡುವಂತೆ ಮಗನಿಗೆ ಪೋಷಕರು ಕೇಳಿದ್ದರು. ಆದರೆ ಪುತ್ರ 2021 ರಲ್ಲಿ ತಂದೆ, ತಾಯಿಯನ್ನು ಬ್ಯಾಟರಾಯನಪುರದ ವೃದ್ಧಾಶ್ರಮಕ್ಕೆ ಸೇರಿಸಿದ್ದ. 2023 ರಲ್ಲಿ ಮತ್ತೆ ಮನೆಗೆ ವಾಪಾಸು ಕರೆದುತಂದಿದ್ದ. ವೃದ್ಧಾಶ್ರಮದಿಂದ ವಾಪಸ್‌ ಬಂದ ನಂತರ ವೃದ್ಧ ದಂಪತಿಗೆ ಮನೆಯಲ್ಲಿ ಸರಿ ಹೊಂದಲಿಲ್ಲ. ಹೀಗಾಗಿ ಕಳೆದ ತಿಂಗಳು ಮತ್ತೆ ಬನಶಂಕರಿ ನಗರದಲ್ಲಿರುವ ವೃದ್ಧಾಶ್ರಮಕ್ಕೆ ಪೋಷಕರನ್ನು ಸೇರಿಸಿದ್ದ.

ಆದರೆ ದಂಪತಿ ಮೊನ್ನೆ ಬೆಳಿಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದಾರೆ. ವೃದ್ಧಾಶ್ರಮದ ಸಿಬ್ಬಂದಿ ಟಿವಿ ನೋಡುವ ವಿಚಾರಕ್ಕೆ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎನ್ನುವ ಮಾಹಿತಿ ನೀಡಿರುವ ಕುರಿತು ವರದಿಯಾಗಿದೆ. ಘಟನೆ ಕುರಿತು ತಲಘಟ್ಟಪುರ ಪೊಲೀಸ್‌ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಎಂದು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Comments are closed.