Death: 12 ವರ್ಷದ ಪ್ರೀತಿ ಫೇಲ್ಯೂ‌ರ್ ಗೆ ಸ್ಯಾಡ್ ರೀಲ್ಸ್! 13ನೇ ಅಂತಸ್ತಿನಿಂದ ಬಿದ್ದು ಯುವತಿ ಸಾವು!

Share the Article

Death: ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ, ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್‌ಗೆ ಮೀಸಲಿದ್ದ ಸ್ಥಳದಲ್ಲಿ ರೀಲ್ಸ್ ಮಾಡುವಾಗ 13ನೇ ಅಂತಸ್ತಿನಿಂದ ಯುವತಿ ಬಿದ್ದು ಜೀವ ಕಳೆದುಕೊಂಡಿದ್ದಾಳೆ.

ಸ್ನೇಹಿತರ ಜೊತೆ ಸೇರಿ ನಿರ್ಮಾಣ ಹಂತದ ಕಟ್ಟಡದ ಬಳಿ ಪಾರ್ಟಿ ಮಾಡಲೆಂದು ಯುವತಿ ನಂದಿನಿ ಹೋಗಿದ್ದಳು. ಈ ಪಾರ್ಟಿಯಲ್ಲಿ ಪ್ರೀತಿ ವಿಚಾರಕ್ಕಾಗಿ ಮಾತುಕತೆ ನಡೆದು ಗಲಾಟೆ ಆಗಿದೆ. 12 ವರ್ಷದ ಲವ್ ಮುರಿದು ಬಿದ್ದಿತ್ತು. ಇದರಿಂದ ಬೇಸರಗೊಂಡಿದ್ದ ಯುವತಿ ಸ್ಯಾಡ್ ರೀಲ್ಸ್ ಮಾಡಲು ಹೋಗಿದ್ದಳು. ಆದರೆ ರೀಲ್ಸ್ ಮಾಡುವಾಗ ತಾನು ಎಲ್ಲಿ ಇದ್ದೇನೆ ಎನ್ನುವುದು ಮರೆತ್ತಿದ್ದ ನಂದಿನಿ

ಬರೋಬ್ಬರಿ 13ನೇ ಅಂತಸ್ತಿನ ಮೇಲಿನಿಂದ ಕೆಳಗೆ ಬಿದ್ದಿದ್ದಾಳೆ.

ನಂದಿನಿ ಶಾಪಿಂಗ್ ಮಾರ್ಟ್ ವೊಂದರಲ್ಲಿ ಕೆಲಸ ಮಾಡುತ್ತಿದ್ದು ಬಿಹಾರ ಮೂಲದವರು ಎಂದು ತಿಳಿದು ಬಂದಿದೆ. ಪೊಲೀಸರ ತನಿಖೆ ವೇಳೆ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಮೃತ ನಂದಿನಿಯ 12 ವರ್ಷದ ಪ್ರೀತಿ ಫೇಲ್ಯೂ‌ರ್ ಆಗಿತ್ತು. ಹೀಗಾಗಿ ಅದೇ ಫೀಲಿಂಗ್‌ನಲ್ಲಿ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತರ ಜೊತೆ ಮದ್ಯಪಾನ ಮಾಡಲು ಹೋಗಿದ್ದಳು. ಈ ವೇಳೆ ಮದ್ಯಪಾನ ಕುಡಿದು ಸ್ಯಾಡ್ ರೀಲ್ಸ್ ಮಾಡುವಾಗ ಕಾಲು ಜಾರಿ ಬಿದ್ದು ನಂದಿನಿ ಜೀವ ಬಿಟ್ಟಿದ್ದಾಳೆ.

ಇದನ್ನೂ ಓದಿ: Belthangady: ಉಜಿರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ!

Comments are closed.