Odisha: ಒಡಿಶಾ: ಇಬ್ಬರ ಬಾಯಿಗೆ ಹುಲ್ಲು ತುರುಕಿ ಪ್ರಾಣಿಯಂತೆ ನಡೆಸಿ, ಚರಂಡಿ ನೀರು ಕುಡಿಸಿ ವಿಕೃತಿ ಮೆರೆದ ಜನ

Share the Article

Odisha: ಗುಂಪೊಂದು ಇಬ್ಬರು ದಲಿತರಿಗೆ ಚಿತ್ರಹಿಂಸೆ ನೀಡಿರುವ ಘಟನೆ ಒಡಿಶಾದ ಗಂಜಾಂನಲ್ಲಿ ನಡೆದಿದೆ. ಈ ಕುರಿತ ವಿಡಿಯೋ ವೈರಲ್‌ ಆಗಿದೆ. ಗುಂಪು ಇಬ್ಬರ ಬಾಯಿಗೆ ಹುಲ್ಲು ತುರುಕಿ ಪ್ರಾಣಿ ರೀತಿ ಎರಡು ಕಿ.ಮೀ. ನಡೆಸಿದ್ದು, ಚರಂಡಿ ನೀರು ಕುಡಿಸಿರುವ ಕುರಿತು ವರದಿಯಾಗಿದೆ.

ಧರಕೋಟೆ ಬ್ಲಾಕ್‌ನ ಸಿಂಗಿಪುರ ಗ್ರಾಮದ ಬುಲು ನಾಯಕ್‌ ಮತ್ತು ಬಾಬುಲಾ ನಾಯಕ್‌ ತಮ್ಮ ಮಗಳ ಮದುವೆಗೆ ವರದಕ್ಷಿಣೆಯಾಗಿ ಮೂರು ಹಸುಗಳನ್ನು ಖರೀದಿ ಮಾಡಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಗುಂಪು ಅವರನ್ನು ತಡೆದು ದನಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆಂದು ಆರೋಪ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.

ಹಣ ಕೊಡಲ್ಲ ಎಂದಾಗ ಹಲ್ಲೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ: Mangaluru Airport: ಮಂಗಳೂರು ವಿಮಾನ ನಿಲ್ದಾಣದಿಂದ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ

Comments are closed.