Home News Iran: ಕನ್ಯತ್ವ ವಿಚಾರಕ್ಕಾಗಿ 16ರ ಬಾಲಕಿಯನ್ನು ಗಲ್ಲಿಗೇರಿಸಿದ ಇರಾನ್ ಗೆ ಕಾಡುತ್ತಿದೆಯಾ ಆ ಅಪ್ರಾಪ್ತೆಯ ಶಾಪ-...

Iran: ಕನ್ಯತ್ವ ವಿಚಾರಕ್ಕಾಗಿ 16ರ ಬಾಲಕಿಯನ್ನು ಗಲ್ಲಿಗೇರಿಸಿದ ಇರಾನ್ ಗೆ ಕಾಡುತ್ತಿದೆಯಾ ಆ ಅಪ್ರಾಪ್ತೆಯ ಶಾಪ- 2004 ರಲ್ಲಿ ನಡೆಡಿದ್ದೇನು?

Hindu neighbor gifts plot of land

Hindu neighbour gifts land to Muslim journalist

Iran: ಇಸ್ರೇಲ್, ಅಮೆರಿಕಾ ತನ್ನ ಮೇಲೆ ನಡೆಸುತ್ತಿರುವ ದಾಳಿಯಿಂದಾಗಿ ಇರಾನ್ ಅಳಿವಿನ ಅಪಾಯದಲ್ಲಿರೂವಾಗಲೇ ಎರಡು ದೇಶಗಳು ಕದನ ವಿರಾಮವನ್ನು ಘೋಷಿಸುವ ಮುನ್ಸೂಚನೆಯನ್ನು ನೀಡಿದ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ 2004 ರಲ್ಲಿ ಇರಾನ್ ನಲ್ಲಿ ನಡೆದಿದ್ದ ಅಪ್ರಾಪ್ತ ಬಾಲಕಿಯ ಗಲ್ಲಿಗೇರಿಸಿದ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಹಾಗಿದ್ದರೆ 2004ರಲ್ಲಿ ಏನಾಗಿತ್ತು? ಇಲ್ಲಿದೆ ನೋಡಿ ಡಿಟೈಲ್ಸ್.

2004 ರಲ್ಲಿ ಅತೀಫ್ ರಜಬಿ ಸಹಾಲೆ ಎಂಬ 13 ವರ್ಷದ ಅಪ್ರಾಪ್ತ ಬಾಲಕಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿತ್ತು. ಅದೂ ಸಂತ್ರಸ್ತೆಯಾಗಿ ರಕ್ಷಣೆಗೊಳಪಡಬೇಕಿದ್ದ ಆಕೆಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿ ಅಮಾನುಷವಾಗಿ ನಡೆದುಕೊಳ್ಳಲಾಗಿತ್ತು. ಇದೀಗ ಇರಾನ್ ಅಪಾಯದ ಸ್ಥಿತಿಯಲ್ಲಿರುವಾಗ ಆ ಅಪ್ರಾಪ್ತ ಬಾಲಕಿಯ ಶಾಪ ತಗುಲಿದೆ ಎಂಬ ಅನುಮಾನಗಳು ಹುಟ್ಟಿಕೊಂಡಿದೆ.

ಅಂದಹಾಗೆ 2004 ರಲ್ಲಿ ಅತೀಫ್ ಚಿಕ್ಕವಯಸ್ಸಿನಲ್ಲಿದ್ದಾಗಲೇ ಪೋಷಕರು ಪರಸ್ಪರ ಬೇರೆಯಾದರು. ಬಳಿಕ ತಾಯಿ ಇನ್ನೊಂದು ಮದುವೆಯಾಗಿದ್ದರು. ಆದರೆ ದುರದೃಷ್ಟವಶಾತ್ ಅತೀಫ್ ತಾಯಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಾಳೆ. ಸಹೋದರ ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಾನೆ. ತಂದೆ ಮಾದಕ ದ್ರವ್ಯ ವ್ಯಸನಿಯಾಗುತ್ತಾನೆ. ಹೀಗಾಗಿ ಆಕೆ ತಾತ-ಅಜ್ಜಿಯ ಆಶ್ರಯಕ್ಕೆ ಬೀಳುತ್ತಾಳೆ. ಆದರೆ ಅವರು ಆಕೆಯ ಬಗ್ಗೆ ಹೆಚ್ಚು ಗಮನ ಕೊಡುವುದೇ ಇಲ್ಲ.

ಹೀಗಿರುವಾಗ 13 ವರ್ಷದ ಅತೀಫ್ ಒಂದು ದಿನ ಪೊಲೀಸರು ರೈಡ್ ಮಾಡುವಾಗ ಒಬ್ಬ ಹುಡುಗನೊಂದಿಗೆ ಕಾರಿನಲ್ಲಿ ಏಕಾಂಗಿಯಾಗಿ ಸಿಕ್ಕಿಬೀಳುತ್ತಾಳೆ. ಹೀಗಾಗಿ ಆಕೆಗೆ ಜೈಲು ಶಿಕ್ಷೆಯ ಜೊತೆಗೆ 100 ಚಾಟಿಯೇಟಿನ ಶಿಕ್ಷೆ ಸಿಗುತ್ತದೆ. ಜೈಲಿನಲ್ಲೂ ಆಕೆಯ ಮೇಲೆ ನಿರಂತರ ಅತ್ಯಾಚಾರವಾಗುತ್ತದೆ. 2003 ರಲ್ಲಿ ಅತೀಫ್ ಳನ್ನು ವ್ಯಭಿಚಾರ ಆರೋಪದಲ್ಲಿ ಮತ್ತೆ ಬಂಧಿಸಲಾಗುತ್ತದೆ.

ಈ ಪ್ರಕರಣದ ತನಿಖೆಯನ್ನು ನಡೆಸಿದ ನ್ಯಾಯಾಧೀಶರ ಮುಂದೆ ಆಕೆ ತಪ್ಪು ಮಾಡಿದವಳು ನಾನಲ್ಲ. ನಾನು ಸಂತ್ರಸ್ತೆ. ನನ್ನ ಮೇಲೆ 51 ವರ್ಷದ ಅಲಿ ದರಾಬಿ ಎಂಬ ರೆವಲ್ಯೂಷನರಿ ಗಾರ್ಡ್ ನಿರಂತರ ಅತ್ಯಾಚಾರವೆಸಗಿದ್ದಾನೆ. ಹೀಗಾಗಿ ನನಗೆ ನ್ಯಾಯ ಬೇಕು ಎಂದು ಕೇಳುತ್ತಾಳೆ. ಆದರೆ ಆಕೆಯ ಮಾತಿಗೆ ಬೆಲೆ ಕೊಡದೇ ಕೋರ್ಟ್ ಆಕೆಗೆ ಜೀವಾವಧಿ ಶಿಕ್ಷೆ ವಿಧಿಸುತ್ತದೆ. ಇದರಿಂದ ಸಿಟ್ಟಿಗೆದ್ದ ಆಕೆ ಕೋರ್ಟ್ ಹಾಲ್ ನಲ್ಲೇ ಹಿಜಾಬ್ ತೆಗೆದು ಆಕ್ರೋಶ ಹೊರಹಾಕುತ್ತಾಳೆ. ನ್ಯಾಯಾಧೀಶರ ಮೇಲೆ ಚಪ್ಪಲಿ ಬಿಸಾಕುತ್ತಾಳೆ. ಆಕೆಯ ಈ ಕೃತ್ಯವನ್ನು ನ್ಯಾಯಾಲಯದ ತೀರ್ಪಿನ ಉಲ್ಲಂಘನೆ ಎಂದು ಪರಿಗಣಿಸಿ ನ್ಯಾಯಾಧೀಶರು ಆಕೆಗೆ ಗಲ್ಲು ಶಿಕ್ಷೆಗೆ ಆದೇಶ ನೀಡುತ್ತಾರೆ. ಇದನ್ನು ಪ್ರಶ್ನಿಸಿ ಆಕೆಯ ಪರ ಲಾಯರ್ ಇರಾನ್ ಸುಪ್ರೀಂಕೋರ್ಟ್ ಗೆ ಹೋದರೂ ಅಲ್ಲೂ ಕೆಳ ಹಂತದ ತೀರ್ಪನ್ನೇ ಎತ್ತಿ ಹಿಡಿಯಲಾಗುತ್ತದೆ.

ಇರಾನ್ ಕಾನೂನು ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಗಲ್ಲು ಶಿಕ್ಷೆ ಕೊಡಬಾರದು. ಆದರೆ ಆ ಹುಡುಗಿಯನ್ನು ಗಲ್ಲಿಗೇರಿಸಲೇಬೇಕು ಎನ್ನುವ ಉದ್ದೇಶದಿಂದ ಕೋರ್ಟ್ ಫೈಲ್‌ನಲ್ಲಿ ಆಕೆಯ ವಯಸ್ಸನ್ನು ತಪ್ಪಾಗಿ 22 ವರ್ಷವೆಂದು ತೋರಿಸಿ ಬಾಲಕಿ ಅತೀಫ್‌ಗೆ ಗಲ್ಲು ಶಿಕ್ಷೆ ಕೊಡಿಸಿದ್ದರು.

ಒಬ್ಬ ಅಮಾಯಕ ಹುಡುಗಿಯನ್ನು ಇರಾನ್ ಬಲಿ ತೆಗೆದುಕೊಂಡಿತು. ಆ ಹುಡುಗಿ ಶಾಪ ಇರಾನ್‌ಗೆ ತಟ್ಟಿದೆ. ಈಗ ಇರಾನ್‌ನಲ್ಲಿ ನಡೀತಿರೋದೆಲ್ಲಾ ಆ ಹುಡುಗಿ ಶಾಪ ಅಂತ ಕೆಲವು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. @Brand_Netan ಎಂಬುವವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಆ ಹುಡುಗಿಗೆ ಗಲ್ಲು ಶಿಕ್ಷೆ ಆದಮೇಲೆ ಇರಾನ್‌ನಲ್ಲಿ ಶಾಂತಿ ಇಲ್ಲ ಅಂತ ಬರೆದಿದ್ದಾರೆ

ಇದನ್ನೂ ಓದಿ: Mangalore: ಮಂಗಳೂರು: ಸಿಕ್ತ್ಸ್‌ ಸೆನ್ಸ್‌ ಬ್ಯೂಟಿ ಸಲೂನ್‌ ಕಾನೂನು ಬಾಹಿರ ಚಟವಿಕೆ, ಪ್ರಕರಣ ದಾಖಲು