Vijayapura : ಪ್ರಬಲ ಸ್ವಾಮೀಜಿ ವಿರುದ್ಧ ಅಕ್ರಮ ಸಂಬಂಧ ಆರೋಪ – ಮಠದಿಂದಲೇ ಹೊರ ಹಾಕಿದ ಗ್ರಾಮಸ್ಥರು

Vijayapura : ನಾಡಿನ ಪ್ರಮುಖ ಮಠವೊಂದರ ಸ್ವಾಮೀಜಿಯ ವಿರುದ್ಧ ಅಕ್ರಮ ಸಂಬಂಧ ಆರೋಪ ಕೇಳಿ ಬಂದಿದ್ದು ಇದರಿಂದ ರೊಚ್ಚಿಗೆದ್ದ ಭಕ್ತಾದಿಗಳು ಆ ಮಠದ ಸ್ವಾಮೀಜಿಯನ್ನೇ ಮಠದಿಂದ ಹೊರ ಹಾಕಿರುವಂತಹ ವಿದ್ಯಮಾನ ಬೆಳಕಿಗೆ ಬಂದಿದೆ.
ಹೌದು, ವಿಜಾಪುರ ಜಿಲ್ಲೆಯ ಶಿವಾಪೂರದ ಅಡವಿಸಿದ್ದೇಶ್ವರ ಮಠದ ಪೀಠಾಧಿಪತಿ ಅಡವಿಸಿದ್ದರಾಮ ಸ್ವಾಮೀಜಿಗೆ ಅಕ್ರಮ ಸಂಬಂಧದ ಆರೋಪ ಎದುರಾಗಿ, ಇಡೀ ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿದ್ದು, ಅಂತಿಮವಾಗಿ ಮಠದಿಂದ ಸ್ವಾಮೀಜಿಯನ್ನು ಹೊರಹಾಕಲಾಗಿದೆ.
ನಿನ್ನೆ (ಜೂ 21) ವಿಜಯಪುರ ಜಿಲ್ಲೆಯ ತಾಳಿಕೋಟಿಯ ಮಹಿಳೆ ತನ್ನ ಮಗಳೊಂದಿಗೆ ಅಡವಿ ಸಿದ್ದೇಶ್ವರ ಮಠಕ್ಕೆ ಆಗಮಿಸಿದ್ದರು. ಆ ಬಳಿಕ ರಾತ್ರಿ 10 ಗಂಟೆಗೆ ಸುಮಾರಿಗೆ ಸ್ಥಳೀಯ ಯುವಕರು ಸ್ವಾಮೀಜಿಯ ಕೊಠಡಿಯೊಳಗೆ ಆ ಮಹಿಳೆ ಇರುವುದನ್ನು ನೋಡಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಸ್ವಾಮಿಯನ್ನ ಹಾಗೂ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಲ್ಲದೆ ಮಠದಂತೆ ಪವಿತ್ರ ಸ್ಥಳದಲ್ಲಿ ಇಂತಹ ಘಟನೆ ಸಂಭವಿಸಿರುವುದು ಖಂಡನೀಯವೆಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಹಿರಿಯರು ಸ್ವಾಮೀಜಿಯನ್ನು ಪ್ರಶ್ನಿಸಿದಾಗ, “ಮಹಿಳೆ ಕತ್ತಲೆ ಸಮಯದಲ್ಲಿ ಉಳಿಯಬೇಕಾಗಿತ್ತು, ನಾನು ಯಾವುದೇ ತಪ್ಪು ಮಾಡಿಕೊಂಡಿಲ್ಲ” ಎಂದು ಅವರು ಸ್ಪಷ್ಟನೆ ನೀಡಿದರು. ಆದರೆ ಗ್ರಾಮಸ್ಥರು ಈ ವಿವರಣೆಯಿಂದ ಸಮಾಧಾನವಾಗದೆ, ಪರಿಸ್ಥಿತಿ ಇನ್ನಷ್ಟು ಉದ್ವಿಗ್ನವಾಯಿತು. ಘಟನೆಯ ಹಿನ್ನೆಲೆ, ಸ್ಥಳಕ್ಕೆ ಪೊಲೀಸರು ಧಾವಿಸಿ ಮಹಿಳೆ ಮತ್ತು ಮಗಳನ್ನು ರಕ್ಷಣಾ ಉದ್ದೇಶದಿಂದ ಸಾಂತ್ವನ ಕೇಂದ್ರಕ್ಕೆ ಕರೆದೊಯ್ದರು.
ಇಡೀ ಗ್ರಾಮಸ್ಥರು ಮಠದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಯಾವುದೇ ಕಾರಣಕ್ಕೂ ಸ್ವಾಮೀಜಿ ಮಠದಲ್ಲಿ ಇರಲು ಅವಕಾಶ ಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ ಸ್ವಾಮೀಜಿಯನ್ನು ಮಠದಿಂದ ಹೊರಹಾಕಲಾಗಿದೆ.
ಇದನ್ನೂ ಓದಿ: NASA: 1967 ರಲ್ಲಿ ನಿಷ್ಕ್ರಿಯಗೊಂಡ ಉಪಗ್ರಹದಿಂದ ಬಂತು ಸಂದೇಶ – ನೋಡಿ ವಿಜ್ಞಾನಿಗಳೆ ಶಾಕ್
Comments are closed.