Railway Station : ರೈಲ್ವೆ ನಿಲ್ದಾಣದಲ್ಲಿ ಅನೌನ್ಸ್ಮೆಂಟ್ ಬಳಿಕ ಮೈಕ್ ಆಫ್ ಮಾಡುವುದನ್ನು ಮರೆತರ ಮಹಿಳಾ ಸಿಬ್ಬಂದಿ – ಆಕೆ ಮಾತು ಕೇಳಿ ಪ್ರಯಾಣಿಕರೆಲ್ಲ ಶಾಕ್ !!

Share the Article

Railway Station : ರೈಲ್ವೆ ನಿಲ್ದಾಣದಲ್ಲಿ ಅನೌನ್ಸ್ಮೆಂಟ್ ಮಾಡಿದ ಬಳಿಕ ಮಹಿಳಾ ಸಿಬ್ಬಂದಿ ಒಬ್ಬರು ಮೈಕ್ ಆಫ್ ಮಾಡುವುದನ್ನು ಮರೆತು ಮಾತನಾಡಿದ ಒಂದು ಘಟನೆ ಇಡೀ ರೈಲ್ವೆ ನಿಲ್ದಾಣದಲ್ಲಿದ್ದ ಪ್ರಯಾಣಿಕರೆಲ್ಲರೂ ನಗೆಗಡಲೆಲ್ಲಿ ತೇಲುವಂತೆ ಮಾಡಿತು.

 

ಹೌದು, ಲಕ್ನೋದ ಚಾರ್‌ಬಾಗ್ ನಿಲ್ದಾಣದಲ್ಲಿ ಇತ್ತೀಚೆಗೆ ನಡೆದ ಘೋಷಣೆಯೊಂದು ಅನಿರೀಕ್ಷಿತ ಹಾಸ್ಯ ಕಾರ್ಯಕ್ರಮವಾಗಿ ಮಾರ್ಪಟ್ಟಿತು. ದೈನಿಕ್ ಭಾಸ್ಕರ್‌ನ ವರದಿ ಪ್ರಕಾರ, ಮಹಿಳಾ ರೈಲ್ವೆ ಸಿಬ್ಬಂದಿಯೊಬ್ಬರು ತಮ್ಮ ಪ್ರಕಟಣೆಯ ಮೈಕ್ರೊಫೋನ್ ಅನ್ನು ಆಫ್ ಮಾಡಲು ಮರೆತಿದ್ದಾರೆ. ಮುಂದೆ ಇದರಿಂದಾಗಿ ನಿಲ್ದಾಣದಲ್ಲಿ ನಿಂತಿದ್ದವರ ನಗುವಿಗೆ ಕಾರಣವಾಗಿದೆ.

 

ಅಂದಹಾಗೆ ಆರಂಭದಲ್ಲಿ ಮೈಕ್ ಮೂಲಕ ಪ್ರಯಾಣಿಕರೇ, ದಯವಿಟ್ಟು ಗಮನ ಕೊಡಿ. ಎಂದು ಹೇಳುತ್ತಿದ್ದಂತೆ ಆ ಅನೌನ್ಸ್‌ಮೆಂಟ್ ಅಲ್ಲಿಗೆ ರದ್ದಾಗುತ್ತದೆ. ನಂತರ, ಪ್ರಯಾಣದ ಸಲಹೆಯ ಬದಲಿಗೆ ಪ್ರಯಾಣಿಕರು ಬೇರೇನನ್ನೋ ಕೇಳುತ್ತಾರೆ. ಅದು ಜನರು ನಗೆ ಕಡಲಲ್ಲಿ ತೇಲುವಂತೆ ಮಾಡುತ್ತದೆ. ಓರ್ವ ಮಹಿಳಾ ಸಿಬ್ಬಂದಿ, “ಕಿತ್ನಾ ಬೇಶರಮ್ ಆದ್ಮಿ ಹೈ. ಔರತ್ ಕೈಸೇ ದೇಖ್ ರಹಾ ಹೈ'( ಎಷ್ಟು ನೀಚ ಮನುಷ್ಯ ಇದ್ದಾನೆ, ಓರ್ವ ಮಹಿಳೆಯನ್ನು ಹೇಗೆ ನೋಡುತ್ತಿದ್ದೀರಿ) ಎಂದು ಹೇಳಿದ್ದು ಕೇಳಿ ಬರುತ್ತದೆ.

 

ಆ ಮಹಿಳೆ ಬೇರೆ ಯಾರಿಗೂ ಹೇಳಿದ್ದ ಮಾತು ಮತ್ತು ಆ ಕ್ಷಣದಲ್ಲಿ ಅವಳು ಮೈಕ್ ಆಫ್ ಮಾಡಲು ಮರೆತಿದ್ದರಿಂದ ಅದು ತಮಾಷೆಯ ಘಟನೆಯಾಗಿ ಹೊರಹೊಮ್ಮಿತು.

 

 

 

ಇದನ್ನೂ ಓದಿ: Vijay devarakonda: ನಟ ವಿಜಯ್ ದೇವರಕೊಂಡ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲು!

Comments are closed.