Bengaluru : ಬೆಂಗಳೂರಲ್ಲಿ ಈ ವ್ಯಕ್ತಿ ವಾಸಿಸೋ ಮನೆ ಬಾಡಿಗೆ ತಿಂಗಳಿಗೆ ಬರೋಬ್ಬರಿ 4 ಲಕ್ಷ !! ವಿಡಿಯೋ ವೈರಲ್

Bengaluru : ಬೆಂಗಳೂರಿನಲ್ಲಿ ವಾಸಿಸುವವರು ಮನೆ ಬಾಡಿಗೆಯನ್ನು ಕಟ್ಟುವಲ್ಲಿಗೆ ಸುಸ್ತು ಹೊಡೆಯುತ್ತಾರೆ. ಮನೆ ಬಾಡಿಗೆಗಳು ಬೆಂಗಳೂರಲ್ಲಂತೂ ಐದು ಸಾವಿರಕ್ಕಿಂತ ಕಡಿಮೆ ಸಿಗುವುದಿಲ್ಲ. ಯಾವೊಂದು ಮನೆಯ ಬಾಡಿಗೆಯು 5000 ಕ್ಕಿಂತ ಹೆಚ್ಚಾಗಿಯೇ ಇರುತ್ತದೆ. ಇನ್ನು ಹೆಚ್ಚೆಂದರೆ ಕೆಲವರು 20, 000 ದಿಂದ 50,000 ತನಕ ಮನೆ ಬಾಡಿಗೆ ಕಟ್ಟುವುದನ್ನು ನೋಡಿದ್ದೇವೆ. ಕೆಲವರು ವ್ಯಾಪಾರಕ್ಕಾಗಿ ಕಟ್ಟಡಗಳನ್ನು ಬಾಡಿಗೆ ತೊಗೊಂಡು ಒಂದು ಲಕ್ಷದವರೆಗೂ ಬಾಡಿಗೆ ಕೊಡುತ್ತಾರೆ. ಆದರೆ ಇನ್ನೊಬ್ಬರ ವ್ಯಕ್ತಿ ತಾವು ವಾಸಿಸುವ ಮನೆಗೆ ತಿಂಗಳಿಗೆ ಬರೋಬ್ಬರಿ ನಾಲ್ಕು ಲಕ್ಷ ಬಾಡಿಗೆಯನ್ನು ಕಟ್ಟುತ್ತಾ ಸುದ್ದಿಯಾಗಿದ್ದಾರೆ.

Man is living in a different Bengaluru… pic.twitter.com/0foQGM3rv0
— Akki Rotti (@Theshashank_p) June 17, 2025
ಹೌದು, ಮೆಕ್ಸಿಕನ್ ಮೂಲದ ವ್ಯಕ್ತಿಯೊಬ್ಬ ಬೆಂಗಳೂರಿನಲ್ಲಿ ವಾಸಿಸಲು ಮಾಸಿಕ 4 ಲಕ್ಷ ರೂಪಾಯಿ ಬಾಡಿಗೆ ಪಾವತಿಸುವ ಮೂಲಕ ಸುದ್ದಿಯಾಗುತ್ತಿದ್ದಾರೆ. ನಂದಿ ಹಿಲ್ಸ್ ರಸ್ತೆಯಲ್ಲಿರುವ ತನ್ನ ಐಷಾರಾಮಿ ಆಸ್ತಿಯನ್ನು ಅವರು ವೀಕ್ಷಿಸುತ್ತಿರುವ ವೀಡಿಯೊ ಆನ್‌ಲೈನ್‌ನಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. @theshashankp ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು ಹಂಚಿಕೊಳ್ಳಲಾಗಿರುವ ಅದರಲ್ಲಿ ಈತ ಮೆಕ್ಸಿಕನ್ ಮೂಲದವನಾಗಿದ್ದು, ಬೆಂಗಳೂರಿನ ಹೊರವಲಯದ ನಂದಿ ಹಿಲ್ಸ್ ರಸ್ತೆಯಲ್ಲಿ ಮನೆಗೆ ತಿಂಗಳಿಗೆ 4 ಲಕ್ಷ ಬಾಡಿಗೆ ಪಾವತಿಸುತ್ತಿದ್ದಾನೆ ಎಂಬ ಸಂಗತಿ ಬಹಿರಂಗವಾಗಿದೆ.
ಅಂದಹಾಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ನೆಲೆಸಿರುವ ಯುವತಿಯೊಬ್ಬಳು ಈ ವ್ಯಕ್ತಿಯನ್ನು ಭೇಟಿಯಾಗಿ, ‘ನೀವು ತಿಂಗಳಿಗೆ ಎಷ್ಟು ಬಾಡಿಗೆ ಪಾವತಿಸುತ್ತೀರಿ?’ ಎಂದು ಕೇಳಿದಾಗ, ಅವನು 4 ಲಕ್ಷ ರೂ.’ ಎಂದು ಉತ್ತರಿಸುತ್ತಾನೆ. ಈ ಉತ್ತರ ಕೇಳಿ ಯುವತಿ ಶಾಕ್ ಆಗುತ್ತಾರೆ. ನಂತರ ಅವರ ಮನೆಯನ್ನು ಒಮ್ಮೆ ಭೇಟಿ ಮಾಡುವುದಾಗಿ ‘ಹೋಮ್ ಟೂರ್’ ಹೇಳಿ ಅವರೊಂದಿಗೆ ಹೋಗುತ್ತಾರೆ.
ತನ್ನ ಮನೆ ಮತ್ತು ಅದರ ಸೌಲಭ್ಯಗಳನ್ನು ತೋರಿಸುತ್ತಿದ್ದಾನೆ. ‘ಮನೆಯಲ್ಲಿ ಸುಂದರ ಒಳಾಂಗಣ ತೋಟ, ಖಾಸಗಿ ಈಜುಕೊಳ, ವಿಶಾಲ ಲಿವಿಂಗ್ ರೂಮ್, ಸುಸಜ್ಜಿತ ಸ್ನಾನಕೋಣೆ ಮತ್ತು ಮೆಕ್ಸಿಕೋದಿಂದ ಇಂಪೋರ್ಟ್ ಮಾಡಿಕೊಳ್ಳಲಾದ ಪೀಠೋಪಕರಣಗಳಿವೆ. ಮನೆ ತುಂಬಾ ಹಸಿರು ಪರಿಸರವೇ ತುಂಬಿಕೊಂಡಿದೆ.
ಇದನ್ನೂ ಓದಿ: Murder: ಅಂಗನವಾಡಿಯಲ್ಲಿ ಚಾಕು ಇರಿದು ಯುವಕನ ಬರ್ಬರ ಹತ್ಯೆ
Comments are closed.