Neeraj Chopra-ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ಚಿನ್ನ ಗೆದ್ದು ಮಿಂಚಿದ ನೀರಜ್ ಚೋಪ್ರಾ

Neeraj chopra: ಪ್ಯಾರಿಸ್‌ನಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ ಭಾರತದ ಕ್ರೀಡಾಪಟು ನೀರಜ್ ಚೋಪ್ರಾ (Neeraj chopra) ಚಿನ್ನದ ಪದಕ ಗೆದ್ದಿದ್ದಾರೆ. 2025ರಲ್ಲಿ ಚೋಪ್ರಾ ಗಳಿಸಿದ ಮೊದಲ ಪ್ರಶಸ್ತಿಯಿದು, ಜೊತೆಗೆ ಎರಡು ವರ್ಷಗಳ ಬಳಿಕ ಡೈಮಂಡ್ ಲೀಗ್‌ನಲ್ಲಿ ಗೆದ್ದ ಮೊದಲ ಪದಕವಾಗಿದೆ.

ಪ್ಯಾರಿ ಡೈಮಂಡ್ ಲೀಗ್‌ನ ಮೊದಲ ಪ್ರಯತ್ನದಲ್ಲೇ ನೀರಜ್ 88.16 ಮೀಟರ್ ದೂರ ಜಾವೆಲಿನ್ ಎಸೆದರು. ನೀರಜ್ ಎಸೆದ ಮೊದಲ ಥ್ರೋ ಪ್ಯಾರಿಸ್ ಡೈಮಂಡ್ ಲೀಗ್‌ನ ಅತ್ಯುತ್ತಮ ಥ್ರೋ ಎಂದು ಸಾಬೀತಾಯಿತು. ಇವರು ಎರಡನೇ ಪ್ರಯತ್ನದಲ್ಲಿ 85.10 ಮೀಟರ್ ಎಸೆದರು. ಇನ್ನು ನೀರಜ್ ತಮ್ಮ ಕೊನೆಯ ಪ್ರಯತ್ನದಲ್ಲಿ 82.89 ಮೀಟರ್ ದೂರ ಜಾವೆಲಿನ್ ಎಸೆದು ಬೀಗಿದರು. ಆದರೆ ಜರ್ಮನಿಯ ವೆಬರ್ ಜಾವೆಲಿನ್ ಇಷ್ಟು ದೂರ ಜಾವೆಲಿನ್ ಎಸೆಯಲು ಸಾಧ್ಯವೇ ಆಗಲಿಲ್ಲ. ಇವರ ಬೆಸ್ಟ್ ಥ್ರೋ ಈ ಲೀಗ್‌ನಲ್ಲಿ 85.10 ಆಗಿತ್ತು. ಹೀಗಾಗಿಯೇ ವೆಬರ್ ಎರಡನೇ ಸ್ಥಾನಕ್ಕೆ ತೃಪ್ತರಾಗಬೇಕಾಯಿತು. ಈ ಲೀಗ್‌ನ ಮೂರನೇ ಸ್ಥಾನವನ್ನು ಬ್ರೆಜಿಲ್‌ನ ಲೂಯಿಜ್ ಮೌರಿಸಿಯೊ ಡ ಸಿಲ್ವಾ (86.62 ಮೀಟರ್) ಪಡೆದರು.
ಇದನ್ನೂ ಓದಿ:Accident: ಟ್ಯಾಂಕರ್ ಮತ್ತು ಕೆ ಎಸ್ ಆರ್ ಟಿ ಸಿ ಬಸ್ ನಡುವೆ ಅಪಘಾತ: ಹಲವು ಪ್ರಯಾಣಿಕರಿಗೆ ಗಂಭೀರ ಗಾಯ!
Comments are closed.