Gujarath : ರಾಯಲ್ ಎನ್‌ಫೀಲ್ಡ್ ಬೈಕ್‌ನೊಂದಿಗೆ ನಡೆಯಿತು 18 ವರ್ಷದ ಯುವಕನ ಅಂತ್ಯಕ್ರಿಯೆ!!

Share the Article

Gujarath: 18 ವರ್ಷದ ಯುವಕ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದನು, ನಂತರ ಅವನ ಕುಟುಂಬವು ಅವನ ಅಂತ್ಯಕ್ರಿಯೆಯನ್ನು ಅವನ ನೆಚ್ಚಿನ ರಾಯಲ್ ಎನ್‌ಫೀಲ್ಡ್ ಬೈಕ್ ಜೊತೆಗೆಯೇ ನಡೆಸಿತು. ಅಂದರೆ ಯುವಕನ ದೇಹವನ್ನು ಹೂಳುವ ಸಂದರ್ಭದಲ್ಲಿ ಬೈಕನ್ನು ಕೂಡ ಅವನೊಂದಿಗೆ ಹೂಳಲಾಯಿತು.

ಗುಜರಾತ್‌ನ ಖೇಡಾ ಜಿಲ್ಲೆಯ ನಾಡಿಯಾಡ್‌ನ ಉತ್ತರಸಂದಾ ಗ್ರಾಮದಲ್ಲಿ ಇಂತಹ ಒಂದು ಅಪರೂಪದ ಘಟನೆ ಬೆಳಕಿಗೆ ಬಂದಿದೆ. ಅಂದಹಾಗೆ ನಾಡಿಯಾಡ್‌ನ ಉತ್ತರಸಂದಾ ಗ್ರಾಮದ ಕ್ರಿಶ್ಚಿಯನ್ ಕಾಲೋನಿಯ ನಿವಾಸಿ 18 ವರ್ಷದ ಕ್ರಿಶ್ ಪರ್ಮಾರ್ ತಮ್ಮ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಗ್ರಾಮದ ಬಳಿ ಅವರ ಬೈಕು ಟ್ರ್ಯಾಕ್ಟರ್ ಟ್ರಾಲಿಗೆ ಡಿಕ್ಕಿ ಹೊಡೆದಿದೆ. ಈ ಸಮಯದಲ್ಲಿ, ಅವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಹನ್ನೆರಡು ದಿನಗಳ ಕಾಲ ಚಿಕಿತ್ಸೆ ಪಡೆದ ನಂತರ ಸಾವನ್ನಪ್ಪಿದನು. ಅವರ ಸಾವು ಕುಟುಂಬದಲ್ಲಿ ತೀವ್ರ ದುಃಖವನ್ನುಂಟುಮಾಡಿತು.

ಬಳಿಕ ಕುಟುಂಬವು ಭಾರವಾದ ಹೃದಯದಿಂದ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಿತು. ಅಲ್ಲದೆ ಅವರ ಅಂತ್ಯಕ್ರಿಯೆಯಲ್ಲಿ, ಅವರ ಬೈಕ್ ಮತ್ತು ಇತರ ನೆಚ್ಚಿನ ವಸ್ತುಗಳನ್ನು ಸಹ ಅವರೊಂದಿಗೆ ಸಮಾಧಿ ಮಾಡಲಾಯಿತು.

ಇದನ್ನೂ ಓದಿ:ಸೌಜನ್ಯ ಹೆಸರಲ್ಲಿ ಹೆಲ್ಪ್ ಲೈನ್ ತೆರೆದು ಪುಂಜಾಲಕಟ್ಟೆಯ ಗಾಯಕನಿಗೆ ವಂಚಿಸಿದ ಬೆಂಗಳೂರು ಮಹಿಳೆ! 

Comments are closed.