Scam: ನರೇಗಾ ಯೋಜನೆಯಡಿ ಹಣ ಪಡೆಯಲು ಸೀರೆಯುಟ್ಟು ರೆಡಿಯಾದ ವ್ಯಕ್ತಿ

Share the Article

Scam: ನರೇಗಾ ಯೋಜನೆಯಡಿ ಹಣ ಪಡೆಯಲು ಇಲ್ಲೊಬ್ಬ ವ್ಯಕ್ತಿ ಮಹಿಳೆ ರೀತಿ ಸೀರೆಯುಟ್ಟು ಫೋಟೋ ತೆಗೆಸಿಕೊಂಡು ಹಣ ಪಡೆದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿಕ್ಕನಾಳ ಗ್ರಾಮದಲ್ಲಿ ನಡೆದಿದೆ .

ಚಿಕ್ಕನಾಳ ಗ್ರಾಮದಲ್ಲಿ ಕಳೆದ ಫೆಬ್ರವರಿಯಲ್ಲಿ ಕಾಮಗಾರಿ ನಡೆದಿತ್ತು. ಅದರ ಕೂಲಿ ಹಣ ಪಡೆಯಲು ವ್ಯಕ್ತಿಯೋರ್ವ ಮಹಿಳೆಯ ರೀತಿ ವೇಷ ತೊಟ್ಟು ಫೋಟೋ ತೆಗೆಸಿಕೊಂಡಿದ್ದಾನೆ. ಆ ಫೋಟೋವನ್ನು ಸ್ವತ ಗ್ರಾಮ ಪಂಚಾಯತಿ ಅಧಿಕಾರಿಗಳೇ ಅಪ್‌ಲೋಡ್‌ ಮಾಡಿದ್ದಾರೆ. ಸೀರೆಯುಟ್ಟ ಪುರುಷನ ಫೋಟೋವನ್ನು ಮಂಗಳಮ್ಮ ಆರಿ ಎಂಬ ಹೆಸರಿನಲ್ಲಿ ಅಪ್‌ಲೋಡ್‌ ಮಾಡಿ ಬಿಲ್‌ ಪಡೆಯಲಾಗಿದೆ.

ಒಂದೇ ಫೋಟೊವನ್ನು ಮೂರು ಕಡೆ ಅಪ್‌ಲೋಡ್‌ ಮಾಡಿರುವುದು ಮತ್ತಷ್ಟು ಸಂಶಯಕ್ಕೆ ಕಾರಣವಾಗಿದ್ದು, ಇದರಿಂದಾಗಿ ಈ ಅವ್ಯವಹಾರದಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳೂ ಶಾಮೀಲಾಗಿರಬಹುದು ಎಂಬ ಅನುಮಾನ ಉಂಟಾಗಿದೆ. ಆದರೆ, ಈ ಕುರಿತು ಪಂಚಾಯತ್‌ ರಾಜ್ ಇಲಾಖೆ ಅಧಿಕಾರಿಗಳಾಗಲಿ ಅಥವಾ ತಾಲೂಕು ಮಟ್ಟದ ಅಧಿಕಾರಿಗಳಾಗಲಿ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:Health: ಎಷ್ಟು ಆರೋಗ್ಯಕರವಾಗಿದ್ದರೂ ಕೂಡ ರಾತ್ರಿ ಈ ಆಹಾರ ತಿನ್ನಬೇಡಿ!

Comments are closed.