Odisha: ಅಂತರ್ಜಾತಿ ವಿವಾಹವಾದ ಮನೆ ಮಗಳು- ತಲೆ ಬೋಳಿಸಿಕೊಂಡು ಪಾಪ ಪರಿಹರಿಸಿಕೊಂಡ ಯುವತಿ ಕುಟುಂಬದ 40 ಸದಸ್ಯರು!!

Share the Article

Odisha: ತಮ್ಮ ಜನಾಂಗದ ಯುವತಿ ಒಬ್ಬಳು ಅಂತರ್ಜಾತಿ ವಿವಾಹವಾದ ಕಾರಣ ಇಡೀ ಬುಡಕಟ್ಟು ಕುಟುಂಬ ಒಂದು ತಲೆಬೋಳಿಸಿಕೊಂಡು ಶುದ್ದೀರಣಗೊಳಿಸಿರುವಂತಹ ಅಚ್ಚರಿ ಘಟನೆ ಎಂದು ಒಡಿಶಾದಲ್ಲಿ ನಡೆದಿದೆ.

ಒಡಿಶಾದ ರಾಯಗಡ ಜಿಲ್ಲೆಯ ಕಾಶಿಪುರ ಬ್ಲಾಕ್‌ನ ಗೋರಖ್‌ಪುರ ಪಂಚಾಯಿತಿ ವ್ಯಾಪ್ತಿಯ ಬೈಗಾನಗುಡ ಗ್ರಾಮದಲ್ಲಿ ಗುರುವಾರ (ಜೂ.19) ಈ ಘಟನೆ ನಡೆದಿದ್ದು ಬುಡಕಟ್ಟು ಜನಾಂಗದ 40 ಮಂದಿ ತಲೆ ಬೋಳಿಸಿಕೊಂಡಿದ್ದಾರೆ. ಶುದ್ದೀಕರಣದ ವೇಳೆ ಗ್ರಾಮ ದೇವತೆಯ ಮುಂದೆ ಮೇಕೆ, ಕೋಳಿ ಮತ್ತು ಹಂದಿಗಳನ್ನು ಬಲಿ ನೀಡಲಾಗಿದೆ ಎಂದು ವರದಿ ಹೇಳಿದೆ.

ವರದಿಗಳ ಪ್ರಕಾರ, ಸುಮಾರು 20 ವರ್ಷ ವಯಸ್ಸಿನ ಬುಡಕಟ್ಟು ಸಮುದಾಯದ ಯುವತಿ ಮತ್ತು ಎಸ್‌ಸಿ ಸಮುದಾಯ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಯುವಕ ಬುಡಕಟ್ಟು ಸಮುದಾಯದವನಲ್ಲ ಎಂಬ ಕಾರಣಕ್ಕೆ ಇವರ ಮದುವೆಗೆ ಯುವತಿ ಕಡೆಯವರು ವಿರೋಧ ವ್ಯಕ್ತಪಡಿಸಿದ್ದರು. ಇದನ್ನು ಲೆಕ್ಕಿಸದೆ ಯುವಜೋಡಿ ಮದುವೆಯಾಗಿದೆ. ಯುವತಿಯ ಸಮುದಾಯದಲ್ಲಿ ಅನ್ಯ ಜಾತಿಯವರನ್ನು ಮದುವೆಯಾಗಲು ಅವಕಾಶ ಇಲ್ಲ. ಹಾಗೇನಾದರು ಮದುವೆಯಾದರೆ, ಅವರ ಇಡೀ ಕುಟುಂಬ ಮತ್ತು ಸಂಬಂಧಿಕರು ಗ್ರಾಮ ದೇವತೆಯ ಕೋಪಕ್ಕೆ ತುತ್ತಾಗುತ್ತಾರೆ. ದೇವತೆಯ ಕೋಪ ತಣಿಸಲು ಇಡೀ ಕುಟುಂಬ ಮತ್ತು ಸಂಬಂಧಿಕರು ಸಮುದಾಯದಲ್ಲಿ ಅಂಗೀಕರಿಸಲ್ಪಡುವ ಶುದ್ಧೀಕರಣ ಆಚರಣೆಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಯುವತಿಯ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ತಲೆ ಬೋಳಿಸಿಕೊಂಡು, ಮೇಕೆ, ಹಂದಿ ಮತ್ತು ಕೋಳಿಗಳನ್ನು ಬಲಿ ನೀಡಿ ಗ್ರಾಮಸ್ಥರಿಗೆ ಭವ್ಯ ಔತಣವನ್ನು ಏರ್ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಯಾರೋ ಒಬ್ಬರು ಈ ವಿಡಿಯೋವನ್ನು ರೆಕಾರ್ಡ್ ಮಾಡಿ ಪೋಸ್ಟ್ ಮಾಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ವಿಡಿಯೋ ತುಣುಕು ವೈರಲ್ ಆಗುತ್ತಿದ್ದಂತೆ, ಜಿಲ್ಲಾಡಳಿತವು ಘಟನೆಯ ತನಿಖೆ ನಡೆಸುವಂತೆ ಕಾಶಿಪುರದ ಬ್ಲಾಕ್ ಅಭಿವೃದ್ಧಿ ಅಧಿಕಾರಿ (ಬಿಡಿಒ) ಅವರಿಗೆ ನಿರ್ದೇಶನ ನೀಡಿದೆ.

ಇದನ್ನೂ ಓದಿ:Puttur: ಪುತ್ತೂರು: ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ!

Comments are closed.