Elephant attack: ತಪ್ಪದ ಆನೆ ಕಾಟ: ಕಾಲರ್ ಅಳವಡಿಸಿದ ಸಲಗದಿಂದ ದಾಂಧಲೆ      

Share the Article

Elephant attack: ದಿನದಿಂದ ದಿನಕ್ಕೆ ಕಾಡು ಪ್ರಾಣಿಗಳ ಉಪಟಳ ಹೇಳತೀರದ್ದಾಗಿದೆ. ಅದರಲ್ಲೂ ಕಾಡಂಚಿನ ಗ್ರಾಮಗಳಲ್ಲಿ ಅವುಗಳದ್ದೇ ಕಾರುಬಾರು, ಮನುಷ್ಯನ ಪ್ರಾಣ ಹಾನಿಯಿಂದ ಹಿಡಿದು ಕೃಷಿ ನಾಶ, ಅಂಗಡಿಗಳೀಗೆ ನುಗ್ಗಿ ದಾಂಧಲೆ ಮಾಡುತ್ತಿವೆ. ಅರಣ್ಯ ಇಲಾಖೆ ಅದೆಷ್ಟೇ ಕ್ರಮಗಳನ್ನು ಕೈಗೊಂಡರು ಅವು ಎಲ್ಲೆ ಮೀರಿ ವರ್ತಿಸುತ್ತಿವೆ. ಇದೀಗ ಸಿದ್ದಾಪುರ ಸಮೀಪ ಕಾಲರ್ ಅಳವಡಿಸಿರುವ ಒಂಟಿ ಆನೆಯೊಂದು ಆತಂಕ ಮೂಡಿಸಿದೆ.

 

ಇಲ್ಲಿನ ಟೀಕ್ ವುಡ್ ಎಸ್ಟೇಟ್ ಬಳಿ ಕಾಫಿ, ಒಳ್ಳೆಮೆಣಸು ಸೇರಿ ಅಪಾರ ಹಾನಿ ಮಾಡಿದೆ, ಹಲಸು, ಮಾವು ಆಸೆಗೆ ಬರುತ್ತಿರುವ ಆನೆಯಿಂದ ಕಾಫಿ ತೋಟಕ್ಕೆ ತೆರಳುವ ಕಾರ್ಮಿಕರಲ್ಲಿ ಆತಂಕ ಮೂಡಿಸಿದೆ. ಇಲ್ಲಿನ ಕಾಫಿ ಕಣಕ್ಕೆ ಅಳವಡಿಸಿರುವ ಸಿಸಿ ಕ್ಯಾಮೆರದಲ್ಲಿ ಆನೆಯ ಚಲನವಲನ ಸೆರೆಯಾಗಿದೆ. ಸುತ್ತಮುತ್ತ ಓಡಾಡುವ ಮಂದಿ ಆತಂಕದಿಂದ ಓಡಾಡುವಂತಾಗಿದೆ.

Comments are closed.