Subramanya : ರೈಲಿನಿಂದ ಬಿದ್ದು ಕುಕ್ಕೇ ಸುಬ್ರಹ್ಮಣ್ಯ ಮಠದ ಜಿಪಿಎ ಹೋಲ್ಡರ್ ಮೃತ್ಯು

Share the Article

Subramanya : ಸುಬ್ರಹ್ಮಣ್ಯದ ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ಜಿಪಿಎ ಹೋಲ್ಡರ್‌ (ಜನರಲ್‌ ಪವರ್‌ ಆಫ್‌ ಅಟಾರ್ನಿ) ಬೆಂಗಳೂರಿನ ಬಸವನಗುಡಿ ನಿವಾಸಿ ಪ್ರಸನ್ನ (64) ಅವರು ರೈಲಿನಿಂದ ಬಿದ್ದು ಮೃತಪಟ್ಟಿದ್ದಾರೆ.

 

ಮೈಸೂರು ರೈಲು ನಿಲ್ದಾಣದಿಂದ ಸುಮಾರು 15 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿರುವುದಾಗಿ ಹೇಳಲಾಗುತ್ತಿದೆ. ಮಠದ ಕೆಲಸ ಮುಗಿಸಿ ಬುಧವಾರದಂದು ರಾತ್ರಿ ನೆಟ್ಟಣದ ರೈಲು ನಿಲ್ದಾಣದಿಂದ ಬೆಂಗಳೂರಿನ ಬಸವನಗುಡಿಯಲ್ಲಿರುವ ತನ್ನ ಮನೆಗೆ ಹೋಗುವ ಸಲುವಾಗಿ ರೈಲು ಏರಿದ್ದು ಈ ವೇಳೆ ಘಟನೆ ನಡೆದಿದೆ.

 

‘ಪ್ರಸನ್ನ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಮಠಕ್ಕೆ ತೆರಳಿದ್ದರು. ಬುಧವಾರ ರಾತ್ರಿ ಮುರುಡೇಶ್ವರ- ಬೆಂಗಳೂರು ಎಕ್ಸ್‌ಪ್ರೆಸ್‌ ಮೂಲಕ ಬೆಂಗಳೂರಿಗೆ ವಾಪಸ್‌ ಆಗುತ್ತಿದ್ದು, ಗುರುವಾರ ಮುಂಜಾನೆ ನಾಗನಹಳ್ಳಿಯ ಬಳಿಯ ತಿರುವೊಂದರಲ್ಲಿ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾರೆ’ ಎಂದು ರೈಲ್ವೆ ಪೊಲೀಸರು ತಿಳಿಸಿದರು.

Comments are closed.