Bangalore: ಮರದ ಕೊಂಬೆ ಬಿದ್ದು ಅಕ್ಷಯ್ ತನ್ನ ಜೀವ ಕಳೆದುಕೊಂಡ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ: ಹೊಸ ಗೈಡ್‌ಲೈನ್ಸ್

Bangalore: ಮರದ ಕೊಂಬೆಯೊಂದು ಬಿದ್ದು ಅಕ್ಷಯ್ ತನ್ನ ಜೀವ ಕಳೆದುಕೊಂಡ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ ಹೊಸ ಆದೇಶಗಳನ್ನು ಇದೀಗ ಜಾರಿ ಮಾಡಿದೆ. ಅಕ್ಷಯ್ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. RFO, ACF, DFO ಮತ್ತು ಬಿಎನ್‌ಎಸ್ ಕಾಯ್ದೆಯ ಸೆಕ್ಷನ್ 105 ರ ಅಡಿ ಎಫ್‌ಐಆರ್ ದಾಖಲಾಗಿದೆ.
ಗೈಡ್ಲೈನ್ಸ್!
ಅವೈಜ್ಞಾನಿಕ ಕಾಮಾಗಾರಿಗಳು ಮರಗಳ ಆರೋಗ್ಯ ಮೇಲೆ ಪರಿಣಾಮ
ಅಸಮರ್ಪಕ ಗಾಳಿ, ನೀರಿನ ಒಳಹರಿವಿನಿಂದ ಬೇರು ಪೋಷಣೆ ಆಗ್ತಿಲ್ಲ
ವೃಕ್ಷಗಳ ಬೇರು ಆಳಕ್ಕೆ ಇಳಿಯದೆ ದುಷ್ಪರಿಣಾಮಗಳಿಗೆ ಕಾರಣ ಆಗ್ತಿದೆ
ಮಳೆ, ಗಾಳಿಯಲ್ಲಿ ಶಕ್ತಿ ಕುಂದಿ ಮರಗಳು, ರೆಂಬೆ-ಕೊಂಬೆಗಳು ಬೀಳುತ್ತಿವೆ
ಕಾಂಕ್ರೀಟಿಕರಣದಿಂದ ಮರಗಳ ಬೇರುಮಟ್ಟದಲ್ಲೇ ಶಕ್ತಿ ಕಳೆದುಕೊಂಡಿವೆ
ರಸ್ತೆ ಬದಿ ನೆಡಲಾದ ಮರಗಳ ಕುರಿತು ಬಿಬಿಎಂಪಿಯಿಂದ ಅಧಿಸೂಚನೆ
1 ಮೀ. ಸುತ್ತಳತೆಯಲ್ಲಿನ ಕಾಂಕ್ರೀಟ್, ಕಲ್ಲು, ಸಿಮೆಂಟ್ ಬ್ಲಾಕ್ಗಳ ತೆರವು
Comments are closed.