Bengaluru: ಮನೆಯಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ: ರಕ್ತಸ್ರಾವದಿಂದ ನಿಧನ!

Bengaluru: ಮಹಿಳೆಯೊಬ್ಬರು ಮನೆಯಲ್ಲಿ ಮಗುವಿಗೆ ಜನ್ಮ ನೀಡಿದ್ದು, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನ (Bengaluru)ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಮಹಿಳೆ ಸಂಜನಾ ಛತ್ತಿಸ್ಗಢ ಮೂಲದವರಾಗಿದ್ದು, ಕೇವಲ 25 ವರ್ಷ ಎನ್ನಲಾಗಿದೆ. ಇನ್ನು ಸಂಜನಾ ಗಂಡನಿಂದ ದೂರವಾಗಿ ತಾಯಿಯ ಜೊತೆ ಜೀವನ ಸಾಗಿಸುತ್ತಿದ್ದಾರೆ. ಗರ್ಭಿಣಿ ಸಂಜನಾ ಮನೆಯಲ್ಲಿ ಮಗುವಿಗೆ ಜನ್ಮ ನೀಡಿದ್ದು, ನಂತರ ತೀವ್ರ ರಕ್ತಸ್ರಾವ ಆಗಿದೆ. ಇನ್ನು ಮಗುವನ್ನ ಕೆ.ಸಿ ಜನರಲ್ ಆಸ್ಪತ್ರೆಯಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
Comments are closed.