Mumbai: ಇಂದು ಮುಸ್ಲಿಮರ ಹಬ್ಬ, ಹಣೆಗೆ ಇಟ್ಟ ತಿಲಕವನ್ನು ಅಳಿಸು- ಹಿರಿಯ ಮುಸ್ಲಿಂ ಉದ್ಯೋಗಿಯಿಂದ ಕಿರುಕುಳ – ವಿಡಿಯೋ ವೈರಲ್

Mumbai: ಮುಂಬೈ ಅಂಗಡಿ ಒಂದರಲ್ಲಿ ನಡೆದ ಹಿಂದೂ-ಮುಸ್ಲಿಂ ಉದ್ಯೋಗಿಗಳ ನಡುವಿನ ವಾಗ್ವಾದ ಒಂದು ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು, ಜೂನ್ 7ರಂದು ಈದ್-ಉಲ್-ಅಝಾ ಸಂದರ್ಭದಲ್ಲಿ ಮುಂಬೈನ ಭಂಡಪ್ ಪಶ್ಚಿಮದಲ್ಲಿರುವ ಕ್ರೋಮಾ ಅಂಗಡಿಯಲ್ಲಿ ಹಿಂದೂ ಉದ್ಯೋಗಿಯೊಬ್ಬರಿಗೆ ತಮ್ಮ ತಿಲಕ ಒರೆಸಲು ಹಿರಿಯ ಉದ್ಯೋಗಿ ರಶೀದ್ ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದ್ದು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಅಂದಹಾಗೆ ಜಿತೇಶ್ ಶರ್ಮಾ ಎಂಬ ಸಹೋದ್ಯೋಗಿಗೆ ರಶೀದ್ ಹಿಂದೂ ಮುಸ್ಲಿಮರ ಹಬ್ಬ, ನೀನು ತನ್ನ ಹಣೆಯ ಮೇಲಿನ ಧಾರ್ಮಿಕ ಗುರುತು ತೆಗೆದು ಅಂಗಡಿಯೊಳಗೆ ಬಾ… ಇಲ್ಲದಿದ್ದರೆ ಕೆಲಸದಿಂದ ತೆಗೆಯುವುದಾಗಿ ಹೇಳಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆದ ನಂತರ ಹಿಂದೂ ಪರ ಸಂಘಟನೆಗಳನ್ನು ಕೆರಳಿಸಿದೆ. ರಶೀದ್ ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಎಲ್ಲರೂ ಆಗ್ರಹಿಸಿದ್ದಾರೆ.
Comments are closed.