Theft: ಕಳ್ಳ, ಪೊಲೀಸ್ ಆಟ ಆಡಿದ ಐನಾತಿ ಕಳ್ಳರು – ಎಂಟು ಪೊಲೀಸ್ ವಸತಿ ಗೃಹದಲ್ಲಿ ಕಳ್ಳತನ

Theft: ಸಾಧಾರಣವಾಗಿ ಕಳ್ಳರು ಜನಸಾಮಾನ್ಯರ ಮನೆಗೆ ನುಗ್ಗಿ ದೋಚಿ ಪರಾರಿಯಾಗುತ್ತಿರುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿರುವ ಬಗೆ ವರದಿಯಾಗುತ್ತದೆ.

ಆದರೆ ಮಡಿಕೇರಿಯಲ್ಲಿ ನಿನ್ನೆ ಕಳ್ಳರು ಪೊಲೀಸರ ವಸತಿ ಗೃಹಕ್ಕೆ ನುಗ್ಗಿ ತಮ್ಮ ಕೈಚಳಕ ತೋರಿಸಿದ್ದಾರೆ. 8 ಪೊಲೀಸ್ ವಸತಿಗೃಹದಲ್ಲಿ ಕಳ್ಳತನ ನಡೆಸಿರುವ ಕಳ್ಳರು ಕೈಗೆ ಸಿಕ್ಕಿರುವ ಬೆಲೆಬಾಳುವ ವಸ್ತುಗಳನ್ನೆಲ್ಲ ಕದ್ದು ಪರಾರಿಯಾಗಿದ್ದಾರೆ.
ಮಡಿಕೇರಿಯ ಮೈತ್ರಿ ಹಾಲ್ ಬಳಿಯಲ್ಲಿರುವ ಪೊಲೀಸ್ ವಸತಿಗೃಹ ಗಳಲ್ಲಿ ಈ ಘಟನೆ ನಡೆದಿದೆ. ಇದೀಗ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರನ್ನೇ ಬಿಡದ ಕಳ್ಳರು ಇನ್ನು ಜನಸಾಮಾನ್ಯರನ್ನು ಬಿಟ್ಟರೇ? ಎಂದು ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಮಡಿಕೇರಿಯಲ್ಲಿ ಮಾತನಾಡಿಕೊಳ್ಳುವ ದೃಶ್ಯ ಕಂಡು ಬಂದಿದೆ.
Comments are closed.