Harassment: ಪತ್ನಿಯ ವರ್ತನೆಯ ಬಗ್ಗೆ ಅನುಮಾನ – ಯೋನಿಗೆ ಮೆಣಸಿನ ಪುಡಿ ಹಾಕಿದ ವ್ಯಕ್ತಿ

Share the Article

Harassment: ಪತ್ನಿಯ ವರ್ತನೆಯ ಬಗ್ಗೆ ಅನುಮಾನಗೊಂಡು ಆಕೆಯ ಯೋನಿಗೆ ಮೆಣಸಿನ ಪುಡಿ ಹಾಕಿ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ ಆರೋಪದಡಿ ಶತ್ರುಘ್ನ ರೈ ಎಂಬಾತನನ್ನು ಬಿಹಾರದಲ್ಲಿ ಬಂಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾದ ಆರೋಪದ ಮೇಲೆ ಪೊಲೀಸರು ಆತನ ತಾಯಿ ಮತ್ತು ಇಬ್ಬರು ಸಂಬಂಧಿಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಎರಡು ದಿನಗಳ ಕಾಲ ಊಟ, ನೀರು ನೀಡದೆ ಕೋಣೆಯಲ್ಲಿ ಬಂಧಿಸಿ ಚಿತ್ರಹಿಂಸೆ ನೀಡಿದ್ದಾರೆಂದು ಎಂದು ಮಹಿಳೆ ಹೇಳಿದ್ದಾರೆ. ಮಹಿಳೆಯ ಸಹೋದರ ಆಕೆಯನ್ನು ಭೇಟಿಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

ದಿಯೋರಿಯಾ ಕೋಠಿ ಪ್ರದೇಶದ ನಿವಾಸಿಯಾಗಿರುವ ಸಂತ್ರಸ್ತೆ ಪೊಲೀಸರ ಮುಂದೆ ನೀಡಿದ ಹೇಳಿಕೆಯಲ್ಲಿ, ಕೋಣೆಯಲ್ಲಿ ಕೂಡಿಹಾಕಿ ದೈಹಿಕವಾಗಿ ಹಲ್ಲೆ ನಡೆಸಿದ್ದಲ್ಲದೆ, ವಿದ್ಯುತ್ ಸ್ಪರ್ಶಿಸಲು ಪ್ರಯತ್ನಿಸಿದ್ದಾಗಿ ಆರೋಪಿಸಿದ್ದಾರೆ. ವರದಿಗಾರರೊಂದಿಗೆ ಮಾತನಾಡಿದ ದಿಯೋರಿಯಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ರಾಮ್ ವಿನಯ್ ಕುಮಾರ್, “ಸಂತ್ರಸ್ತ ಮಹಿಳೆ ನೀಡಿದ ಹೇಳಿಕೆಯ ಆಧಾರದ ಮೇಲೆ, ಆಕೆಯ ಪತಿ ಮತ್ತು ಮಾವಂದಿರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆಕೆಯ ಪತಿ ಶತ್ರುಘ್ನ ರೈ ಅವರನ್ನು ಬಂಧಿಸಲಾಗಿದ್ದು, ಆಕೆಯ ಅತ್ತೆ-ಮಾವಂದಿರು ಪರಾರಿಯಾಗಿದ್ದಾರೆ. ಸಂತ್ರಸ್ತೆಯೂ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.”

“ಸಂತ್ರಸ್ತ ಮಹಿಳೆ ನೀಡಿದ ಹೇಳಿಕೆಯ ಪ್ರಕಾರ, ಈ ಘಟನೆ ಜೂನ್ 13 ರಂದು ನಡೆದಿದೆ. ಆಕೆಯ ಪತಿ ಆಕೆಯನ್ನು ಕೋಣೆಯೊಳಗೆ ಕೂಡಿಹಾಕಿ ಎರಡು ದಿನಗಳ ಕಾಲ ದೈಹಿಕವಾಗಿ ಹಲ್ಲೆ ನಡೆಸುತ್ತಲೇ ಇದ್ದರು. ಆಕೆಗೆ ಎರಡು ದಿನಗಳ ಕಾಲ ಆಹಾರ ಮತ್ತು ನೀರು ನೀಡಲಾಗಿಲ್ಲ ಎನ್ನಲಾಗಿದೆ.

Comments are closed.