Oparation sindhu: ‘ಆಪರೇಷನ್ ಸಿಂಧು’ ಯಶಸ್ವಿ ಆರಂಭ: ಇರಾನ್‌ನಿಂದ ಸ್ಥಳಾಂತರಗೊಂಡು ದೆಹಲಿ ತಲುಪಿದ 110 ಭಾರತೀಯ ವಿದ್ಯಾರ್ಥಿಗಳು

Share the Article

Oparation sindhu : ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಇರಾನ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಗಳನ್ನು ತುರ್ತು ಸಹಾಯದಿಂದ ಸ್ಥಳಾಂತರಿಸುವ ಕಾರ್ಯವನ್ನು ಭಾರತ ಸರ್ಕಾರ ಯಶಸ್ವಿಯಾಗಿ ಆರಂಭಿಸಿದೆ. ಈ ಕಾರ್ಯಾಚರಣೆಗೆ ಭಾರತ ಸರ್ಕಾರ ‘ಆಪರೇಷನ್ ಸಿಂಧು’ (Oparation sindhu) ಎಂಬ ಹೆಸರನ್ನು ನೀಡಿದೆ.

ಈ ರಕ್ಷಣಾತ್ಮಕ ಕಾರ್ಯಾಚರಣೆಯ ಮೊದಲ ಹಂತದಲ್ಲಿ, ಇರಾನ್ ರಾಜಧಾನಿ ಟೆಹ್ರಾನ್‌ನಿಂದ 110 ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿ, ಅವರು ಅರ್ಮೇನಿಯಾದಿಂದ ವಿಶೇಷ ವಿಮಾನದ ಮೂಲಕ ತಡರಾತ್ರಿ ನವದೆಹಲಿಗೆ ಸುರಕ್ಷಿತವಾಗಿ ಬಂದಿಳಿದಿದ್ದಾರೆ.

ಇರಾನ್‌ನಲ್ಲಿ ಇನ್ನೂ ಹಲವಾರು ವಿದ್ಯಾರ್ಥಿಗಳು ಉಳಿದಿದ್ದಾರೆ , ಅವರನ್ನು ಕೂಡ ಶೀಘ್ರದಲ್ಲೇ ದೇಶಕ್ಕೆ ಕರೆತರಲಾಗುವುದು ಎಂಬ ವಿಶ್ವಾಸವನ್ನು ಸರ್ಕಾರ ನೀಡಿದೆ.

ಇದನ್ನೂ ಓದಿ:Reservation:ವಸತಿ ನಿರ್ಮಾಣ ಯೋಜನೆ – ಅಲ್ಪಸಂಖ್ಯಾತರ ಜನಸಂಖ್ಯೆ ಜಾಸ್ತಿಯಾಗ್ತಿದೆ – ಹಾಗಾಗಿ ಅವರಿಗೆ ಅವಕಾಶ – ಡಿಕೆ ಶಿವಕುಮಾರ್

Comments are closed.