Airport: ಮತ್ತೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ: ಇದು ಹುಸಿ ಬೆದರಿಕೆ ಕರೆ ಎಂದ ಅಧಿಕಾರಿಗಳು

Airport: ಒಂದು ವಾರದಲ್ಲಿ ಎರಡು ಬಾರಿ ಬೆಂಗಳೂರು ಕೆಂಪೇಗೌಡ ಏರ್ಪೋಟ್ ಗೆ ಹುಸಿ ಬಾಂಬ್ ಕರೆ ಬಂದಿದೆ. ಏರ್ಪೋಟ್ ಭದ್ರತಾ ಪಡೆಯ ಮೇಲ್ ಗೆ ಬಾಂಬ್ ಬೆದರಿಕೆ ಮೇಲ್ ಬಂದಿದೆ. ಉಗ್ರ ಅಜ್ಮಲ್ ಕಸಬ್ ಗೆ ಗಲ್ಲು ಹಾಕಿದ್ದು ಸರಿಯಿಲ್ಲ ಅಂತಲು ಉಗ್ರನ ಹೆಸರಲ್ಲಿ ಬಾಂಬ್ ಬೆದರಿಕೆ ಮೇಲ್ ಬಂದಿದೆ. ಈ ತಿಂಗಳ 13 ಮತ್ತು 16 ರಂದು ಎರಡು ಬಾಂಬ್ ಬೆದರಿಕೆ ಸಂದೇಶವನ್ನು ಕಿಡಿಗೇಡಿಗಳು ಮೇಲ್ ಮಾಡಿದ್ದಾರೆ.

ಪಜಲ್ ಗೇಮ್ ರೀತಿ ಎರಡು ಕಡೆ ಬಾಂಬ್ ಇಟ್ಟಿದ್ದು ಪ್ಲಾನ್ ಎ ಪೈಲ್ ಆದ್ರೆ ಪ್ಲಾನ್ ಬಿ ಎಂದು ಬೆದರಿಕೆ ಹಾಕಿದ್ದಾರೆ. ಏರ್ಪೋಟ್ ನ ಶೌಚಾಲಯದ ಪೈಪ್ ಲೈನ್ ನಲ್ಲಿ ಬಾಂಬ್ ಇಟ್ಟಿರುವುದಾಗಿ ಮಾಹಿತಿ ನೀಡಿದ್ದರು. ಬೆದರಿಕೆ ಮೇಲ್ ಹಿನ್ನೆಲೆ ಎಲ್ಲೆಡೆ ಪರಿಶೀಲನೆ ನಡೆಸಿದ ನಂತರ ಅಧಿಕಾರಿಗಳು ಇದು ಹುಸಿ ಬಾಂಬ್ ಮೇಲ್ ಎಂದು ಸ್ಪಷ್ಟಪಡಿಸಿದ್ದಾರೆ.
ಹುಸಿ ಬಾಂಬ್ ಮೇಲ್ ಬಂದ ಮೇಲ್ ಐಡಿಗಳ ಮೇಲೆ ಕೆಂಪೇಗೌಡ ಏರ್ಪೋಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ಹುಸಿ ಬಾಂಬ್ ಮೇಲ್ಗಳು ಮತ್ತೆ ಆಕ್ಟೀವ್ ಆಗಿವೆ. ಇದೀಗ ಮತ್ತೆ ಏರ್ಪೋಟ್ ಪೊಲೀಸರು ಮತ್ತು ಅಧಿಕಾರಿಗಳಿಗೆ ಹುಸಿ ಬಾಂಬ್ ಮೇಲ್ ಮತ್ತು ಕರೆಗಳು ತಲೆ ನೋವಾಗಿ ಪರಿಣಮಿಸಿವೆ.
Comments are closed.