Bangalore: ಮರದ ಕೊಂಬೆ ಬಿದ್ದು ಯುವಕ ಸಾವು ಪ್ರಕರಣ: ಕಣ್ಣುಗಳನ್ನು ದಾನ ಮಾಡಿದ ಕುಟುಂಬ

Bangalore: ಬೆಂಗಳೂರಿನಲ್ಲಿ ಜೂನ್ 15 ರಂದು ಮರದ ಕೊಂಬೆ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ ಯುವಕ ಅಕ್ಷಯ್ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಆತನ ಕುಟುಂಬದವರು ಸಾರ್ಥಕತೆ ಮೆರೆದಿದ್ದಾರೆ.

ಬನಶಂಕರಿ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ಅಕ್ಷಯ್ ತಲೆ ಮೇಲೆ ಮರದ ಕೊಂಬೆ ಬಿದ್ದು ಗಂಭೀರ ಗಾಯಗೊಂಡಿದ್ದು, ತಲೆಗೆ ತೀವ್ರವಾದ ಪೆಟ್ಟು ಬಿದ್ದಿದ್ದು, ಬ್ರೈನ್ ಡೆಡ್ ಆಗಿದೆ ಎಂದು ವೈದ್ಯರು ಘೋಷಣೆ ಮಾಡಿದ್ದು, ಇಂದು ಅಕ್ಷಯ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.
ಅಕ್ಷಯ್ ಕುಟುಂಬ ಅಕ್ಷಯ್ ಕಣ್ಣುಗಳನ್ನು ದಾನ ಮಾಡಲು ನಿರ್ಧಾರ ಮಾಡಿದೆ. ಕಣ್ಣುಗಳನ್ನು ಕಿಮ್ಸ್ ಆಸ್ಪತ್ರೆಗೆ ನೀಡಲು ಮುಂದಾಗಿದೆ.
Comments are closed.