UP: ಪೊಲೀಸ್ ಹುದ್ದೆಗೆ ಒಟ್ಟಿಗೆ ಸೆಲೆಕ್ಟ್ ಆದ ತಂದೆ-ಮಗ !! ಇಬ್ಬರೂ ಕಾನ್ಸ್ಟೇಬಲ್ಗಳಾಗಿ ನೇಮಕ !!

UP: ಉತ್ತರ ಪ್ರದೇಶದಲ್ಲಿ ಒಂದು ಅಪರೂಪದ ವಿದ್ಯಮಾನ ನಡೆದಿದ್ದು ಪೊಲೀಸ್ ಪರೀಕ್ಷೆಯಲ್ಲಿ ತಂದೆ ಮತ್ತು ಮಗ ಇಬ್ಬರು ಒಟ್ಟಿಗೆ ಪಾಸಾಗಿದ್ದಾರೆ. ಅಷ್ಟೇ ಅಲ್ಲದೆ ಇಬ್ಬರು ಜೊತೆಯಾಗಿ ನೇಮಕಾತಿಯನ್ನು ಪಡೆದಿದ್ದಾರೆ.

ಹೌದು, ಉತ್ತರ ಪ್ರದೇಶದ ಹಾಪುರದ ನಿವೃತ್ತ ಸೇನಾ ಸಿಬ್ಬಂದಿ ಮತ್ತು ಅವರ 21 ವರ್ಷದ ಮಗ ಎರಡೂವರೆ ವರ್ಷಗಳ ತಯಾರಿಯ ನಂತರ ಯುಪಿ ಪೊಲೀಸ್ ಪರೀಕ್ಷೆಯನ್ನು ಒಟ್ಟಿಗೆ ಪಾಸು ಮಾಡಿ ಪೊಲೀಸ್ ಕಾನ್ಸ್ಟೆಬಲ್ಗಳಾಗಿ ಆಯ್ಕೆಯಾಗಿದ್ದಾರೆ.. ಈ ತಂದೆ- ಮಗನ ಸ್ಟೋರಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಅಂದಹಾಗೆ ಲಕ್ನೋದಲ್ಲಿ ನಡೆದ ಸಮಾರಂಭದಲ್ಲಿ ನಿವೃತ್ತ ಯೋಧ ಯಶ್ಪಾಲ್ ಸಿಂಗ್ (41) ಮತ್ತು ಮಗ ಶೇಖರ್ (21) ಜತೆಜತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ನೇಮಕಾತಿ ಪತ್ರ ಪಡೆದರು.
ಸೇನೆಯಲ್ಲಿ ಹದಿನಾರು ವರ್ಷ ಸೇವೆ ಸಲ್ಲಿಸಿ 2019ರಲ್ಲಿ ಸ್ವಯಂ ನಿವೃತ್ತಿ ಪಡೆದ ಯಶ್ಪಾಲ್ ಸಿಂಗ್ ಇದೀಗ ಮಹತ್ವಾಕಾಂಕ್ಷೆಯೊಂದಿಗೆ ಖಾಕಿ ಸಮವಸ್ತ್ರ ಧರಿಸಿದ್ದಾರೆ. ಸೇನೆಯಿಂದ ನಿವೃತ್ತಿ ಪಡೆದ ಬಳಿಕ ಅಲ್ಪಕಾಲ ದೆಹಲಿಯ ಆರ್ಮಿ ಆರ್ಡಿನೆನ್ಸ್ ಕಾಪ್ಸ್ ನಲ್ಲಿ ಸಿಂಗ್ ಕರ್ತವ್ಯದಲ್ಲಿದ್ದರು. ಇದೇ ವೇಳೆ ಮಗ ಶೇಖರ್ ನಗರ್ (18) ಶಾಲಾ ಶಿಕ್ಷಣ ಮುಗಿಸಿ ವೃತ್ತಿ ಕಂಡುಕೊಳ್ಳುವ ಹುಡುಕಾಟದಲ್ಲಿದ್ದ. ಪೊಲೀಸ್ ಆಗಬೇಕು ಎಂಬ ಕನಸು ಕಾಣುತ್ತಿದ್ದ. ತಂದೆ-ಮಗನ ಸಂಭಾಷಣೆ ಇದಕ್ಕೆ ಸ್ಪಷ್ಟ ರೂಪು ನೀಡಿತು. ತಂದೆ ಯಶ್ಪಾಲ್ ನಗರ್ ಕಳೆದ ಎರಡೂವರೆ ವರ್ಷಗಳಿಂದ ತಮ್ಮ ಹಿರಿಯ ಮಗ ಶೇಖರ್ ಜೊತೆ ಯುಪಿ ಪೊಲೀಸ್ ನೇಮಕಾತಿಗೆ ತಯಾರಿ ನಡೆಸುತ್ತಿದ್ದರು. ಯಶ್ಪಾಲ್ ತಮ್ಮ ಮಗನೊಂದಿಗೆ ಗ್ರಂಥಾಲಯಕ್ಕೆ ಹೋಗುತ್ತಿದ್ದರು ಮತ್ತು ಇಬ್ಬರೂ ಅಲ್ಲಿ ತಯಾರಿ ನಡೆಸುತ್ತಿದ್ದರು. ಹೀಗಾಗಿ ಅವರ ಪ್ರಯತ್ನ ಫಲ ಕೊಟ್ಟಿದೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯಶ್ಪಾಲ್, ಪೊಲೀಸ್ ನೇಮಕಾತಿ ಪರೀಕ್ಷೆಗಾಗಿ ಆಪ್ಟಿಟ್ಯೂಡ್, ರೀಸನಿಂಗ್ ಮತ್ತು ಸಾಮಾನ್ಯ ಅಧ್ಯಯನಗಳಿಗೆ ತಯಾರಿ ನಡೆಸಬೇಕಾಗಿತ್ತು. ನನ್ನ ಮಗ ಮತ್ತು ನಾನು ಇಬ್ಬರೂ ಒಂದೇ ಗ್ರಂಥಾಲಯದಲ್ಲಿ ಅಧ್ಯಯನ ಮಾಡಲು ಹೋಗುತ್ತಿದ್ದೆವು. ನಾವು ಓದುವಾಗ ಅಕ್ಕಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದೆವು. ಆದರೆ ಶೇಖರ್ ನನ್ನ ಮಗ ಎಂದು ಯಾರಿಗೂ ತಿಳಿದಿರಲಿಲ್ಲ” ಎಂದು ಹೇಳಿದ್ದಾರೆ.
मैं जनपद हापुड़ का निवासी हूँ और आर्मी से रिटायर्ड हूँ, मेरा और मेरे बेटे का चयन उत्तर प्रदेश पुलिस आरक्षी 60,244 भर्ती में हुआ है। भर्ती बिलकुल निष्पक्ष तरीके से हुई है। इसके लिए हम मा0 मुख्यमंत्री जी को धन्यवाद करते हैं।
चयनित पिता-पुत्र अभ्यर्थी#MissionShakti#YuvaShaktiUPP pic.twitter.com/Lf0AoyORQa
— HAPUR POLICE (@hapurpolice) June 16, 2025
Comments are closed.