K S Eshwarappa : ನಾನು ಮತ್ತು ಯಡಿಯೂರಪ್ಪ ಅಣ್ಣ, ತಮ್ಮ ಇದ್ದಂತೆ – ಈಶ್ವರಪ್ಪ ಹೇಳಿಕೆ

K S Eshwarappa : ಕಳೆದ ಲೋಕಸಭಾ ಚುನಾವಣೆಯ ಬಳಿಕ ಚಡ್ಡಿದೋಸ್ತ್ ನಂತಿದ್ದ ಬಿ ಎಸ್ ಯಡಿಯೂರಪ್ಪ ಅವರನ್ನು ದ್ವೇಷಿಸುತ್ತಲೇ ಬರುತ್ತಿದ್ದ ಕೆ ಎಸ್ ಈಶ್ವರಪ್ಪ ಅವರು ಇದೀಗ ಯಾಕೋ ಯಡಿಯೂರಪ್ಪನವರ ಮೇಲೆ ಮೃದು ಧೋರಣೆ ತೋರಿಸುತ್ತಿದ್ದಾರೆ. ಅಷ್ಟೇ ಅಲ್ಲ ಯಡಿಯೂರಪ್ಪ ಮತ್ತು ನಾನು ಅಣ್ಣ ತಮ್ಮ ಇದ್ದಂತೆ ಎಂಬ ಹೇಳಿಕೆಯನ್ನು ಕೂಡ ನೀಡಿದ್ದಾರೆ.
ಹೌದು, ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ನನ್ನ ನಡುವೆ ವೈಯಕ್ತಿಕ ಸ್ನೇಹವಿದೆ. ನಾನು ಅವರು ಅಣ್ಣ ತಮ್ಮನ ರೀತಿ. ಆದರೆ ಅದಕ್ಕೂ, ರಾಜಕಾರಣಕ್ಕೂ ಸಂಬಂಧವಿಲ್ಲ. ನಾನು ಯಡಿಯೂರಪ್ಪ ವಿರೋಧಿಯಲ್ಲ. ವೈಯಕ್ತಿಕವಾಗಿ ಅವರನ್ನು ವಿರೋಧಿಸುವುದಿಲ್ಲ. ಆದರೆ ಬಿಜೆಪಿ ಪಕ್ಷ ಅವರ ಕುಟುಂಬದ ಹಿಡಿತದಲ್ಲಿದೆ. ಅದಕ್ಕೆ ನನ್ನ ವಿರೋಧವಷ್ಟೇ ಎಂದರು.
ಅಲ್ಲದೆ ಕಾಂಗ್ರೆಸ್‌ಗೆ ಹೋಗುತ್ತೀರಾ ಅಥವಾ ಮತ್ತೆ ಬಿಜೆಪಿಗೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕೆ.ಎಸ್ ಈಶ್ವರಪ್ಪ, ಕುತ್ತಿಗೆ ಕೊಯ್ದರೂ ನಾನು ಕಾಂಗ್ರೆಸ್‌ಗೆ ಹೋಗುವುದಿಲ್ಲ, ಆದರೆ ಮತ್ತೆ ನಾನು ಬಿಜೆಪಿಗೆ ಹೋಗಬಹುದು.
Comments are closed.